ಶಾಂತಿಯೇ ಇಸ್ಲಾಮಿನ ಮೂಲ ಮಂತ್ರ: ಪ್ರೊ.ಚಂದ್ರಕಾಂತ್

Update: 2017-08-13 12:52 GMT

ತುಮಕೂರು, ಆ.13: ಶಾಂತಿಯ ಬುನಾದಿಯೆ ಜೀವನದ ಮೌಲ್ಯವಾಗಿದ್ದು, ಇಸ್ಲಾಂ ಧರ್ಮದ ಮೂಲ ಮಂತ್ರ ಶಾಂತಿಯಾಗಿದೆ ಎಂದು ಸುಪ್ರಿಂ ಕೌನ್ಸಿಲ್ ಸದಸ್ಯ ಪ್ರೊ. ಚಂದ್ರಕಾತ್ ತಿಳಿಸಿದ್ದಾರೆ.

ನಗರದ ಟೌನ್‌ಹಾನ್ ವೃತ್ತದಲ್ಲಿ ಜಮಿಯ್ಯತ್ ಉಲಮಾ ತುಮಕೂರು ಜಿಲ್ಲೆ ಆಯೋಜಿಸಿದ್ದ ಶಾಂತಿ ನಡೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ದೇಶ ಅಭಿವೃದ್ಧಿಯಾಗಬೇಕಾದರೆ ದೇಶದಲ್ಲಿ ವಾಸಿಸುವ ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಾಗಬೇಕು. ಧರ್ಮ, ಜಾತಿಗಳನ್ನು ಲೆಕ್ಕಿಸದೆ ಎಲ್ಲರು ಒಟ್ಟಾಗಿ ಜೀವಿಸುವುದರಿಂದ ದೇಶದಲ್ಲಿ ಯಾವುದೇ ಅವಘಡಗಳು ಸಂಭವಿಸುವುದಿಲ್ಲ ಎಂದರು.

ಇಸ್ಲಾಂ ಧರ್ಮದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಕೆಡಿಸಲು ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಹಾಗೂ ಕೆಲವು ಮಾಧ್ಯಮಗಳು ಟೊಂಕ ಕಟ್ಟಿ ನಿಂತಿವೆ. ಆದರೆ ಇತರ ಧರ್ಮದಂತೆ ಇಸ್ಲಾಂ ಧರ್ಮವು ಒಂದಾಗಿದ್ದು, ಬದುಕುವ ಹಕ್ಕನ್ನು ಪಡೆದುಕೊಂಡಿದೆ. ಭಾರತದಲ್ಲಿ ಜಾತ್ಯಾತೀತತೆಯಿಂದ ಮಾತ್ರ ಸೌಹಾರ್ಧ ಬದುಕು ಕಾಣಲು ಸಾಧ್ಯವಾಗುತ್ತದೆ. ಕೆಲ ರಾಜಕೀಯ ಪಕ್ಷಗಳು ಇಸ್ಲಾಂ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದರು.

ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ನಾವೆಲ್ಲ ಭಾರತೀಯರು. ಕೆಲವು ವ್ಯಕ್ತಿಗಳು ಅಲ್ಪ ಸಂಖ್ಯಾತರಲ್ಲಿ ಬಿರುಕು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮುಸ್ಲಿಂ ಬಾಂಧವರು ಇತರೆ ಎಲ್ಲರನ್ನು ಸಂಭಂದಿಕರಂತೆ ಕಾಣುವಾರಾಗಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ಕಡೆಯು ಇಂದು ಶಾಂತಿನಡಿಗೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಸ್ವತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಧರ್ಮದ ವ್ಯಕ್ತಿಗಳು ಭಾಗಿಯಾಗಿದ್ದರು ಎಂಬುದಕ್ಕೆ ಟಿಪ್ಪು ಸುಲ್ತಾನ್ ಸಾಕ್ಷಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಮೌಲಾನ್ ಮುಸ್ತಾಕ್ ಅಹಮದ್, ಮುಫ್ತಿ ಶೇಕ್‌ ಮಹಮದ್, ಮುಖರ್ರಂ ಸಾಹಿದ್, ಉಮರ್ ಫಾರೂಕ್, ಮೌಲನಾ ಮುತಿಕ್ ಉರ್ ರಹಮಾನ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News