ಮಕ್ಕಳನ್ನು ರಂಜಿಸಿದ ರಂಗ ನಂದನ ಕಾರ್ಯಕ್ರಮ

Update: 2017-08-13 13:46 GMT

ಕುಶಾಲನಗರ, ಆ 13; ಇಂದಿನ ದಿನಗಳಲ್ಲಿ ಮಕ್ಕಳು ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸುತ್ತಿದ್ದು, ಯುವ ಜನತೆಯು ನಮ್ಮ ಪೂರ್ವಿಕರ ಸಮಾಜ ಮುಖಿಯಾಗಿದ್ದ ಮೌಲ್ಯವರ್ದಿತ ರಂಗಭೂಮಿಯನ್ನು ಮರೆಯುತ್ತಿರುವ ಇಂತಹ ಸಮಯದಲ್ಲಿ ರಂಗಭೂಮಿಯ ನಾಟಕಗಳು ಮಕ್ಕಳಲ್ಲಿ ಆಡಗಿರುವ ಪ್ರತಿಭೆಯನ್ನು ಹೊರತರಲು ಸಹಕಾರಿಯಯಾಗಿದೆ ಎಂದು ಉಪನ್ಯಾಸಕ ಹಂಡ್ರಗಿ ನಾಗರಾಜ್ ಇಂದಿಲ್ಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ ಇವರ ವತಿಯಿಂದ ಶಾಲಾ ಅವರಣದಲ್ಲಿ ಬೆಂಗಳೂರಿನ ನವಚೇತನ ಲೀಲಾವತಿ ಅಶ್ವಥ್ ನಾರಾಯಣ್ ತಂಡದವರಿಂದ ಸಾಹಿತ್ಯ ಮತ್ತು ರಂಗಭೂಮಿ ಶಿಬಿರವನ್ನು ಎರ್ಪಡಿಸಲಾಗಿತ್ತು.

ನಿರ್ದೇಶಕರಾದ ಅಣ್ಣಯ್ಯನವರ ನೇತೃತ್ವದಲ್ಲಿ ಹಿನ್ನೆಲೆಗಾಯನದೊಂದಿಗೆ ಮೂಡಿ ಬಂದ ಕುಂವೆಪುರವರು ವಿರಚಿತ ಬೆರಳ್ಗೆ ಕೊರಳ್ ಮತ್ತು  ರಾಮನ ಪಾಧುಕೆ ಪಟ್ಟಾಬಿಷೇಕ ನಾಟಕ ಮಕ್ಕಳನ್ನು ರಂಜಿಸಿದವು.
     
     
    
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News