ಲೋಕ ಅದಾಲತ್‌ನಲ್ಲಿ 267 ಪ್ರಕರಣ ಇತ್ಯರ್ಥ

Update: 2017-08-13 15:20 GMT

ಚಿಕ್ಕಬಳ್ಳಾಪುರ, ಆ.13: ರಾಷ್ಟ್ರೀಯ ಮಾಸಿಕ ಲೋಕ ಅದಾಲತ್‌ನಲ್ಲಿ ಶನಿವಾರ 267 ಪ್ರಕರಣ ಇತ್ಯರ್ಥವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿದ್ದ ಅದಾಲತ್‌ನಲ್ಲಿ ವಿದ್ಯುತ್‌ಚ್ಛಕ್ತಿ, ನೀರಿನ ಬಿಲ್, ಹಣ ವಸೂಲಾತಿ, ಚೆಕ್, ಕಾರ್ಮಿಕ ಇಲಾಖೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ, ಮೋಟಾರು ವಾಹನ, ನ್ಯಾಯಾಲಯದಲಿ್ಲ ಹಾಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.

ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ಪೈಕಿ 1091 ರಾಜಿ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 133 ಪ್ರಕರಣದಲ್ಲಿ ಒಟ್ಟು 52,24,053 ರೂಪಾಯಿ ಇತ್ಯರ್ಥಪಡಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ 302 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 134 ಪ್ರಕರಣದಲ್ಲಿ 13,25,386 ರೂಪಾಯಿ ಇತ್ಯರ್ಥವಾಗಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧಿೀಶರಾದ ಎಚ್.ಸಿ. ನಾಗರತ್ನ, ಎಚ್. ದೇವರಾಜ್, ಲೋಕೇಶ್, ಎಸ್.ಎಂ. ಅರಟಗಿ, ಅನುಪಮಾ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News