ರೈತ ಆತ್ಮಹತ್ಯೆ

Update: 2017-08-13 15:22 GMT

ಚಿಕ್ಕಬಳ್ಳಾಪುರ, ಆ.13: ಸಾಲಭಾದೆಯಿಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೊಡ್ಡಕಿರುಗಂಭಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ದ್ಯಾವಪ್ಪ(45) ಆತ್ಮಹತ್ಯೆಗೆ ಶರಣಾದ ರೈತ.

ಇತ್ತೀಚಿಗಷ್ಟೇ ರೈತ ದ್ಯಾವಪ್ಪ 4 ಕೊಳವೆಭಾವಿ ಕೊರೆಸಿದ್ದ ಇದರಲ್ಲಿ 3 ವಿಫಲವಾಗಿತ್ತು. 1 ಕೊಳವೆಬಾವಿಯಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ನೀರು ಸಿಕ್ಕಿತ್ತು. ಈ ನೀರಲ್ಲೇ ತನ್ನ 3 ಎಕರೆ ಜಮೀನಿನಲ್ಲಿ ರೇಷ್ಮೆ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ, ನೀರಿಕ್ಷಿತ ಪ್ರಮಾಣದಲ್ಲಿ ಬೆಳೆ ಕೈಗೆ ಸಿಗದೇ ನಷ್ಟ ಅನುಭವಿಸಿದ್ದ ಎನ್ನಲಾಗಿದೆ. ರೈತ ದ್ಯಾವಪ್ಪ ನಾಯನಹಳ್ಳಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 10 ಲಕ್ಷ ಬೆಳೆಸಾಲ ಹಾಗೂ 5 ಲಕ್ಷದವರೆಗೆ ಕೈ ಸಾಲ ಮಾಡಿದ್ದು, ಬೆಳೆ ನಷ್ಟದಿಂದ ಮನನೊಂದು ತನ್ನ ತೋಟದಲ್ಲಿನ ಕೋಳಿಫಾರಂ ಶೆಡ್‌ನ ಮೇಲ್ಚಾವಣಿಯ ಮರದ ದಿಮ್ಮಿಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ. ಮೃತ ರೈತನಿಗೆ ಪತ್ನಿ, ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ನಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News