×
Ad

ಜೂಜು ಅಡ್ಡೆ ಮೇಲೆ ದಾಳಿ : ಐವರ ಬಂಧನ

Update: 2017-08-13 20:54 IST

ಚಿಕ್ಕಬಳ್ಳಾಪುರ, ಆ.13: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ನಗರ ಪೊಲೀಸರು 5 ಮಂದಿಯನ್ನು ಬಂಧಿಸಿದ್ದು, 1600 ರೂ. ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಸತೀಶ್(28), ಮಂಜುನಾಥ್(30), ಮಂಜುನಾಥ್(20), ಆಸೀಫ್(20), ಮಂಜುನಾಥ್(36) ಬಂಧಿತರು. ನಗರದ ಶಿಡ್ಲಘಟ್ಟ ರಸ್ತೆಯ ಸರ್‌ಎಂವಿ ಪ್ರೌಢಶಾಲೆಯ ಬಳಿಯ ರಾಜಕಾಲುವೆಯಲ್ಲಿ ಇಸ್ಪೀಟ್ ಜೂಜುನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ ನಗರ ಠಾಣೆ ಪಿಎಸೈ ರಾಮ್‌ಪ್ರಸಾಧ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು, ಸ್ಥಳದಲ್ಲಿ 1600 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News