ಓಟದ ರಾಜನಿಗೆ ವಿದಾಯ..!

Update: 2017-08-13 18:17 GMT

ವಿಶ್ವದ ಶರವೇಗದ ಓಟಗಾರ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ತನ್ನ ಕೊನೆಯ ಓಟದಲ್ಲಿ ಜಮೈಕಾ ತಂಡಕ್ಕೆ ಪದಕ ತಂದು ಕೊಡಲು ಸಾಧ್ಯವಾಗದೆ ಕಣ್ಣೀರ ವಿದಾಯ ಹೇಳಿದರು. ಜಮೈಕಾ ತಂಡದ ಪರ 4* 100 ರಿಲೇಯಲ್ಲಿ ಓಡಿದ ಬೋಲ್ಟ್ ಓಟದ ಮಧ್ಯೆಯೇ ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿ ಮುಗ್ಗರಿಸುವುದರೊಂದಿಗೆ ಅಂತಿಮ ಓಟದಲ್ಲಿ ನಿರಾಶೆ ಅನುಭವಿಸಿದರು. ಇದರಿಂದಾಗಿ ಅವರ ತಂಡ ರಿಲೇ ಪೂರ್ಣಗೊಳಿಸಲಾಗದೆ ಕೂಟದಿಂದ ಹೊರ ಬಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor