ಓ ಮೆಣಸೇ..

Update: 2017-08-13 18:48 GMT


  ಹಿಂಸೆಯಿಂದ ನಮ್ಮ ಸಿದ್ಧಾಂತ ದಮನ ಮಾಡಲು ಸಾಧ್ಯವಿಲ್ಲ -ಅರುಣ್ ಜೇಟ್ಲಿ, ಕೇಂದ್ರ ಸಚಿವ
ಎಷ್ಟಾದರೂ ಹಿಂಸೆಯಿಂದಲೇ ಹುಟ್ಟಿದ ಸಿದ್ಧಾಂತವಲ್ಲವೇ?
--------------------
ಚೀನಾ ವಸ್ತು ಬಹಿಷ್ಕರಿಸಿ -ಶೋಭಾ ಕರಂದ್ಲಾಜೆ, ಸಂಸದೆ
 ವಲ್ಲಭಬಾಯಿ ಪಟೇಲ್‌ರ ಬೃಹತ್ ಪ್ರತಿಮೆಯನ್ನೂ ಬಹಿಷ್ಕರಿಸಬೇಕಾಗುತ್ತದೆ.

---------------------

  ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಮಾತೃ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚು ಚುರುಕು -ಜೆ.ಆರ್.ಲೋಬೋ, ಶಾಸಕ
 
ಅದಕ್ಕೇ ಇರಬೇಕು, ಸರಕಾರಿ ಶಾಲೆಗಳಿಗೆ ನೀವು ಚುರುಕು ಮುಟ್ಟಿಸುತ್ತಿರುವುದು.

---------------------
 
ನನ್ನ ರಾಜಕಾರಣಕ್ಕೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
  ಅದರ ಋಣ ತೀರಿಸುವುದಕ್ಕಾಗಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯೇ?
---------------------
  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲು ಡಿಜಿಟಲ್ ಯೋಧರ ಅಗತ್ಯವಿದೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಚೀನಾದಿಂದ ತರಿಸುವುದಕ್ಕೆ ಒಪ್ಪಂದವಾಗಿದೆಯಂತೆ.
---------------------
ಮನೆಯಲ್ಲಿ ಪೂಜೆ ಇತ್ತು ಹಾಗಾಗಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ -ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
 
ನನ್ನ ಅಧಃಪತನಕ್ಕೆ ನಡೆಸಿದ ವಿಶೇಷ ಪೂಜೆ ಅದು ಎಂದು ಯಡಿಯೂರಪ್ಪ ಆರೋಪಿಸಿದರಂತೆ.

---------------------
 
ಎಐಎಡಿಎಂಕೆಯ 2 ಬಣಗಳು ವಿಲೀನವಾಗುವುದನ್ನು ನೋಡಲು ನಾನು ಕಾಯುತ್ತಿದ್ದೇನೆ -ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ
 
ಜಯಲಲಿತಾ ಅವರೊಂದಿಗೇ ವಿಲೀನವಾಗುವ ಕ್ಷಣಗಳಿಗಾಗಿಯೂ ಕೆಲವರು ಕಾಯುತ್ತಿದ್ದಾರೆ.

---------------------
 
ಭಾರತ ಬದಲಾಗಿರುವುದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಕೂಡಾ ಬದಲಾಗಬೇಕು -ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ
  ತಾವಂತೂ ಬದಲಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ.
------------------------------------------
ಇನ್ನು ಮುಂದೆ 35 ಸಾವಿರಕ್ಕೆ ಒಂದು ಲೋಡ್ ಮಲೇಶ್ಯಾ ಮರಳು ಸಿಗಲಿದೆ -ಟಿ.ಬಿ.ಜಯಚಂದ್ರ, ಸಚಿವ
 
ರಾಜ್ಯದ ಮನೆಗಳನ್ನೆಲ್ಲ ಇನ್ನು ಮುಂದೆ ಮೇಡ್ ಇನ್ ಮಲೇಶ್ಯಾ ಎಂದು ಕರೆಯಲು ಅಡ್ಡಿಯಿಲ್ಲ.

---------------------
 
ಸಾಹಿತಿಗಳಲ್ಲಿ ಎಡ-ಬಲ ಪಂಥಗಳಿಲ್ಲ -ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
ಭೈರಪ್ಪ ಮತ್ತು ಭೈರಪ್ಪ ವಿರೋಧಿ ಪಂಥಗಳಷ್ಟೇ ಸದ್ಯಕ್ಕಿರೋದು ಅಂತೀರಾ?
---------------------
 
ಪ್ರತಿಯೊಬ್ಬರಿಗೂ ಸಂಸ್ಕೃತ ಭಾಷೆಯ ಅರಿವು ಬಂದರೆ, ಭಾರತೀಯ ಸಂಸ್ಕೃತಿಯ ವಿರುದ್ಧ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತದೆ -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಇಂಗ್ಲಿಷ್ ಅರಿವು ಬಂದರೆ ತಮ್ಮ ಸಂಸ್ಕೃತಿಯ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಭಯವೇ?
---------------------
  ಹೆರಿಗೆ ಸಂಕಟ ಏನೆಂಬುದು ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು (ಐಟಿ ದಾಳಿ ಬಗ್ಗೆ) -ಡಿ.ಕೆ.ಶಿವಕುಮಾರ್, ಸಚಿವ
 
ಗುಜರಾತ್‌ನಲ್ಲಿ ನಡೆದಿರುವ ನಿಮ್ಮ ಹೆರಿಗೆ ಗಜಪ್ರಸವ ಬಿಡಿ.

--------------------
 
ಕನಸುಗಳನ್ನು ನೀವು ಎಂದಿಗೂ ಬಿಟ್ಟು ಕೊಡಬೇಡಿ -ಬಾಬಾ ರಾಮ್‌ದೇವ್, ಯೋಗಗುರು
  ಅದು ನಿಮ್ಮ ಹೊಸ ಉತ್ಪನ್ನದ ಹೆಸರೇ?
---------------------
 
ಉ.ಪ್ರ.ದಲ್ಲಿ ಈಗ ಯಾರನ್ನೂ ಯಾರೂ ಕೇಳದಂತಹ ಸ್ಥಿತಿ ನಿರ್ಮಾಣವಾಗಿದೆ -ಅಖಿಲೇಶ್ ಯಾದವ್, ಉ.ಪ್ರ.ಮಾಜಿ ಮುಖ್ಯಮಂತ್ರಿ
  ತಂದೆಯನ್ನು ಮಗ, ಮಗನನ್ನು ತಂದೆ ಕೇಳದಂತಹ ಸ್ಥಿತಿ ನಿರ್ಮಾಣವಾದ ಮೇಲೆ ಇನ್ನೇನು?
---------------------

ಚುನಾವಣೆಗಳು ವೈಯಕ್ತಿಕ ಹಾಗೂ ರಾಜಕೀಯ ದ್ವೇಷಕ್ಕೆ ಬಲಿಯಾಗುತ್ತಿರುವುದು ಅಪಾಯಕಾರಿ -ಅಹ್ಮದ್ ಪಟೇಲ್, ರಾಜ್ಯಸಭಾ ಸದಸ್ಯ
  ದ್ವೇಷಕ್ಕೆ ಜನಸಾಮಾನ್ಯರು ಬಲಿಯಾದರೆ ಪರವಾಗಿಲ್ಲವೇ?
---------------------

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನಾನು ಮಾತನಾಡಲ್ಲ -ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  ಪ್ರತ್ಯೇಕ ಒಕ್ಕಲಿಗರ ಧರ್ಮವನ್ನೇನಾದರೂ ಸ್ಥಾಪಿಸುವ ಯೋಜನೆಯಿದೆಯೇ?
---------------------
 
ಮುಸ್ಲಿಮರಲ್ಲಿ ಅಭದ್ರತೆ ಭಾವನೆ ಮೂಡಿದೆ -ಹಾಮಿದ್ ಅನ್ಸಾರಿ, ಮಾಜಿ ಉಪರಾಷ್ಟ್ರಪತಿ
  ನೀವು ಉಪರಾಷ್ಟ್ರಪತಿ ಸ್ಥಾನ ತ್ಯಜಿಸುವುದರಿಂದಾಗಿಯೇ?
---------------------
 
2022ರ ವೇಳೆಗೆ ಹೊಸ ಭಾರತಕ್ಕೆ ಪಣ ತೊಡಬೇಕು -ನರೇಂದ್ರ ಮೋದಿ, ಪ್ರಧಾನಿ
  ಅಂದರೆ ಹಳೆ ಭಾರತವನ್ನು ಸರ್ವನಾಶ ಮಾಡಿಯೇ ಸಿದ್ಧ ಎಂದು ನಿರ್ಧರಿಸಿದ್ದೀರಿ ಎಂದಾಯಿತು.
---------------------
 
ಭಾರತ ವಿಶ್ವಗುರು ಆಗಬೇಕು ಎಂದು ಆರೆಸ್ಸೆಸ್ ಬಯಸುತ್ತದೆ-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಆದರೆ ವಿಶ್ವವೂ ಬಯಸಬೇಕಲ್ಲವೇ?
---------------------
  ಮುಸ್ಲಿಮರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಜಮ್ಮು- ಕಾಶ್ಮೀರದಲ್ಲಿ ಹಲವಾರು ವೈವಿಧ್ಯತೆಗಳಿವೆ. - ಮಹಬೂಬ ಮುಫ್ತಿ, 
 
ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಇನ್ನೂ ಉಳಿದಿವೆಯೇ ಎಂದು ಬಿಜೆಪಿ ಅಚ್ಚರಿಪಡುತ್ತಿದೆಯಂತೆ.

---------------------
 
ಶೇ.50 ರಷ್ಟು ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರು -ಪ್ರಮೋದ್ ಮುತಾಲಿಕ್, 
  ಶ್ರೀ ರಾಮ ಸೇನೆ ಅಧ್ಯಕ್ಷ ಅಂದರೆ ಉಳಿದ ಶೇ.50 ಮಂದಿ ಪ್ರಾಮಾಣಿಕರು ಎಂದು ಬಿಜೆಪಿಗೆ ನಿಮ್ಮ ಪ್ರಮಾಣಪತ್ರವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...