ಹಲ್ಲೆ ಆರೋಪಿಗೆ ದಂಡ
ಚಿಕ್ಕಮಗಳೂರು, ಆ.14: ಮದ್ಯಪಾನ ಮಾಡಿ ಹಲ್ಲೆ ಮಾಡಿದ ಆರೋಪಿಗೆ ದಂಡ ವಿಧಿಸಿ ನಗರದ 1 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ತೀರ್ಪು ನೀಡಿದೆ.
ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರ ಗ್ರಾಮದ ಶ್ರೀ ರಂಗಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ 2015 ಮಾ.5 ರಂದು ಸಂಜೆ ಸಮಯದಲ್ಲಿ ಕ್ಯಾಶಿಯರ್ ರಾಜಶೇಖರ ಎಂಬಾತನಿಗೆ ಬೇಲೂರು ತಾಲ್ಲೂಕು ಸಂಶೆಟ್ಟಿ ಹಳ್ಳಿಯ ಹರೀಶ್, ರುದ್ರೇಶ, ಅಶೋಕ ಮತ್ತು ಸಂತೋಷ್ ಎಂಬವರು ಮದ್ಯಪಾನ ಮಾಡಿ ಬಿಲ್ಲು ಕೊಡುವ ವಿಚಾರದಲ್ಲಿ ಹಲ್ಲೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಠಾಣೆ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ನೇ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಹೆಗಡೆ ಆರೋಪಿತರಾದ ಹರೀಶ್, ರುದ್ರೇಶ, ಅಶೋಕ ಮತ್ತು ಸಂತೋಷ್‌ಗೆ 28,000 ದಂಡ ವಿಧಿಸಿ, ದಂಡದ ಮೊತ್ತದಲ್ಲಿ 20,000 ರೂ.ಗಳನ್ನು ನೊಂದವನಿಗೆ ಪರಿಹಾರ ರೂಪದಲ್ಲಿ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್.ವಿ ಮೊಕದ್ದಮೆಯನ್ನು ನಡೆಸಿದ್ದರು.