ಕ್ವಿಟ್ ಇಂಡಿಯಾ ಚಳುವಳಿ ಸಂಕಲ್ಪ ಸಿದ್ದಿ ಕಾರ್ಯಕ್ರಮ

Update: 2017-08-14 13:06 GMT

ಕಡೂರು, ಆ. 14: ಪಂಡಿತ್ ದೀನ್ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಕ್ವಿಟ್ ಇಂಡಿಯಾ ಚಳುವಳಿ ಸಂಕಲ್ಪ ಸಿದ್ದಿ ಕಾರ್ಯಕ್ರಮದ ಅಂಗವಾಗಿ ಕಡೂರು ಪುರಸಭೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಲಾಯಿತು.

ಸೋಮವಾರ ಬೆಳಗ್ಗೆ ಪುರಸಭಾ ಅಧ್ಯಕ್ಷ ಎಂ. ಮಾದಪ್ಪ, ಮುಖ್ಯಾಧಿಕಾರಿ ಮಂಜಪ್ಪ, ಸದಸ್ಯರಾದ ಎಂ. ಸೋಮಶೇಖರ್, ಮೈಲಾರಪ್ಪ ಮತ್ತು ಆಶ್ರಯ ಸಮಿತಿ ಸದಸ್ಯ ಕೆ.ಜಿ. ಲೋಕೆಶ್ ನೇತೃತ್ವದಲ್ಲಿ ಜಾಗೃತಿ ಜಾಥ ನಡೆಯಿತು.

ಜಾಥ ಮೆರವಣಿಗೆಯು ಪುರಸಭೆಯಿಂದ ಹೊರಟು ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆ, ಕೆ.ಎಂ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಪ್ರಮುಖ ಬೀದಿಗಳಲ್ಲಿ ಸ್ವಸಹಾಯ ಸಂಘಗಳಿಗೆ ಅರಿವು ಮೂಡಿಸಿತು.

ಈ ಸಂದರ್ಭ ಮಾಧ್ಯಮದೊಂದಿಗೆ ಪುರಸಭೆ ಅಧ್ಯಕ್ಷ ಎಂ.ಮಾದಪ್ಪ ಮಾತನಾಡಿ, ಪಟ್ಟಣದಲ್ಲಿರುವ ಸ್ವಸಹಾಯ ಸಂಘ ಹಾಗೂ ಗುಂಪುಗಳಿಗೆ ಬಡ ಸದಸ್ಯರನ್ನು ಗುರುತಿಸಿ ಸೇರ್ಪಡೆಗೊಳಿಸಿ ಅವುಗಳನ್ನು ಸಂಘಟಿಸುವುದು ಈ ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ ಮಾತನಾಡಿ, ಈ ಸ್ವಸಹಾಯ ಸಂಘಗಳ ಸಾಮರ್ಥ್ಯ ಮತ್ತು ಮಾರುಕಟ್ಟೆ ಬೇಡಿಕೆಯನ್ನು ಗುರುತಿಸಿ ಇದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುವುದಲ್ಲದೆ, ಪ್ರತಿ ವರ್ಷ ಸಂಘವು ಕೈಗೊಳ್ಳಬೇಕಾದ ಪೂರ್ವ ಸಿದ್ದತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಂಘ ಮತ್ತು ಗುಂಪುಗಳನ್ನು ಸಿದ್ದ ಪಡಿಸುವುದು ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News