×
Ad

ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ

Update: 2017-08-14 19:00 IST

ದಾವಣಗೆರೆ, ಆ.14: ಓವರ್ ಲೋಡ್ ನಿಲ್ಲಿಸಿ, ಲಾರಿ ಮಾಲೀಕರನ್ನು ಉಳಿಸುವಂತೆ ಹಾಗೂ ಲಾರಿಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ ನೀಡುವಂತೆ ನಗರದಲ್ಲಿ ಸೋಮವಾರ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಈರುಳ್ಳಿ ಮಾರುಕಟ್ಟೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಪಿಬಿ ರಸ್ತೆಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತೆರಳಿ, ನಂತರ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ನನ್ನುಸಾಬ್ ಮಾತನಾಡಿ, ಜಿಲ್ಲೆಯಲ್ಲಿ ವರ್ತಕರು ಲಾರಿಗಳಲ್ಲಿ ರಹದಾರಿ ಪರವಾನಗಿಗಿಂತ ಅತಿ ಹೆಚ್ಚು ಸರಕು ಸಾಗಾಣಿಕೆ ಮಾಡುತ್ತಿದ್ದಾರೆ. ಇದರಿಂದ ಲಾರಿ ಉದ್ಯಮಕ್ಕೆ ಧಕ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ಪ್ರಭಾವದಿಂದ ಲಾರಿಗಳಿಗೆ ಲೋಡ್‌ಗಳು ಸಿಗದೆ ಮತ್ತು ಹೊರ ಜಿಲ್ಲೆಗಳಿಂದ ಬಂದಂತಹ ಲಾರಿಗಳು ಕಡಿಮೆ ಬಾಡಿಗೆಗೆ ಓವರ್ ಲೋಡ್ ಮಾಡಿಕೊಂಡು ಮತ್ತು ಹೆಚ್ಚಿನ ಲೋಡಿಂಗ್ ಹಮಾಲಿ ಕೊಡುತ್ತಿದ್ದಾರೆ ಎಂದು ಅವರು ದೂರಿದರು.

ಊರಿನ ಲಾರಿಗಳು ಕಡಿಮೆ ಬಾಡಿಗೆಗೆ ಹೋಗದೆ ಇರುವ ಕಾರಣ ಹೊರ ಜಿಲ್ಲೆ ಲಾರಿಗಳಿಗೆ ಲೋಡ್ ಕೊಡುತ್ತಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಬರಗಾಲದಿಂದ ರೈತರು ಬೆಳೆಗಳನ್ನು ಬೆಳೆಯದ ಕಾರಣ ನಮ್ಮ ಲಾರಿಗಳಿಗೆ ಲೋಡ್‌ಗಳು ಸಿಗುತ್ತಿಲ್ಲ ಎಂದ ಅವರು, ಲಾರಿಗಳಿಗೆ ಹಣಕಾಸು ಸಂಸ್ಥೆಗಳು ಸಾಲದ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಸ್ಥೆಯವರಿಗೆ ಸಾಲ ಮರುಪಾವತಿಸಲು ಕನಿಷ್ಠ 6 ತಿಂಗಳು ಸಮಯ ನೀಡಬೇಕು. ತಡವಾಗಿ ಪಾವತಿಸಿದ್ದಲ್ಲಿ ಕಂತುಗಳಿಗೆ ಓವರ್ ಡ್ಯೂ ಬಡ್ಡಿ ವಿಧಿಸುತ್ತಾರೆ. ಇದನ್ನು ವಜಾಗೊಳಿಸಿ ಲಾರಿ ಮಾಲೀಕರನ್ನು ಉಳಿಸುವಂತೆ ಒತ್ತಾಯಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News