ಕಳಸ ತಾಲೂಕು ಕೇಂದ್ರವನ್ನು ಘೋಷಿಸಲು ಆಗ್ರಹ

Update: 2017-08-14 14:04 GMT

ಮೂಡಿಗೆರೆ, ಆ.14: ರಾಜ್ಯ ಸರಕಾರ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ರಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ. ಈ ಆದೇಶವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವ ರೋಶನ್ ಬೇಗ್ ಅವರು ಘೋಷಣೆ ಮಾಡಿ ಕಳಸ ಭಾಗದ ಜನರಿಗೆ ಹಬ್ಬದ ವಾತಾವರಣವಾಗುವಂತೆ ಮಾಡಬೇಕೆಂದು ಶಾಸಕ ಬಿ.ಬಿ.ನಿಂಗಯ್ಯ ಆಗ್ರಹಿಸಿದರು.

 ಅವರು ಸೋಮವಾರ ಪಟ್ಟಣದ ಪತ್ರಿಕಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ 15 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದಾಗ ತಾನು ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಒತ್ತಾಯಿಸಿ ಒಂದು ಗಂಟೆಗಳ ಕಾಲ ವಿಧಾನಸಭಾ ಅಧಿವೇಶನದಲ್ಲಿ ಸದನದ ಭಾವಿಗಿಳಿದು ದರಣಿ ನಡೆಸಿದ್ದೆನು. ಅಲ್ಲದೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡರು ಕೂಡ ಪತ್ರ ಬರೆದು ಒತ್ತಾಯಿಸಿದ್ದಲ್ಲದೆ, ಕಳಸ ಭಾಗದಲ್ಲಿ ಸಾರ್ವಜನಿಕರು ಹೋರಾಟ ನಡೆಸಿದ್ದರು. ಈ ಎಲ್ಲಾ ಹೋರಾಟದ ಫಲವಾಗಿ ಮುಖ್ಯಮಂತ್ರಿಗಳು ಕಳಸವನ್ನು ತಾಲೂಕಾಗಿ ಘೋಷಿಸಲು ಒಪ್ಪಿಕೊಂಡು ಆದೇಶ ಹೊರಡಿಸಿದ್ದಾರೆ. ಈ ಪತ್ರ ಜಿಲ್ಲಾಧಿಕಾರಿಗಳಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.

ಈ ಭಾಗದಲ್ಲಿ ಧಾರ್ಮಿಕ ಶ್ರದ್ದಾ ಕ್ಷೇತ್ರವಾದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಳಸದ ಕಳಸೇಶ್ವರ, ತುಂಗಾಭದ್ರ ನದಿಯ ಉಗಮಸ್ಥಾನದ ಗಂಗಾಮೂಲ, ಹೇಮಾವತಿ ನದಿ ಮೂಲ ಹಾಗೂ ಪುರಾತನ ಜೈನ ಬಸತಿಗಳು ಸೇರಿದಂತೆ 31 ಸಾವಿರ ಜನಸಂಖ್ಯೆ ಹೊಂದಿದ್ದು, ಮೂಡಿಗೆರೆ ಪಟ್ಟಣ್ಕಕೆ ದೂರವಾಗಿದ್ದರಿಂದ ಕಳಸ ತಾಲೂಕು ರಚನೆ ಅತ್ಯಂತ ಸೂಕ್ತವಾಗಿದ್ದು, ತಾಲೂಕು ರಚನೆಗೆ ಈ ಕೇತ್ರದ ಶಾಸಕನಾಗಿ ತನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಳಸವನ್ನು ತಾಲೂಕು ಕೇಂದ್ರ ಮಾಡಿ ಕಳಸದ ಜನರಿಗೆ ಹಬ್ಬದ ವಾತಾವರಣ ನಿರ್ಮಾಣ ಮಾಡಿರುವ ಹೆಗ್ಗಳಿಕೆ ಸರಕಾರಕ್ಕೆ ಸಲ್ಲಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಮಲೆನಾಡಿನಲ್ಲಿರುವ ಕಾಡಾನೆಗಳ ನಿಯಂತ್ರಣಕ್ಕೆ ಆನೆ ಕಾರಿಡಾರ್ ಮತ್ತು ಆನೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಫಾ.ನಂ.53 ಯಲ್ಲಿ ಅರ್ಜಿ ಹಾಕಿದವರಿಗೆ ವಿಲಾವಾರಿಗಳಿಗೆ ತೊಂದರೆಗಳಿದ್ದು, ಪ್ರಮುಖವಾಗಿ ಅರಣ್ಯ ಕಂದಾಯ ಭೂಮಿಯನ್ನು ಪಕ್ಕಾಪೋಡ್ ಮಾಡದೇ ವಿಲಾವಾರಿ ಮಾಡುವಂತಿಲ್ಲವೆಂಬ ಆದೇಶವಿರುವುದರಿಂದ ಹಿನ್ನಡೆಯಾಗಿದೆ. ಅಲ್ಲದೆ 94ಸಿ ಅರ್ಜಿಯಲ್ಲಿ ನಿವೇಶನ ರಹಿತರಿಗೆ ಧಾಖಲೆ ನೀಡಲು ಸಾಧ್ಯವಾಗದೇ ಇರುವುದರಿಂದ ಕೂಡಲೇ ಸರ್ವೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News