ಅಮಿತ್ ಷಾ ಅಥವಾ ಇನ್ನಾರೇ ಬರಲಿ ಏನೂ ಆಗುವುದಿಲ್ಲ: ರೋಷನ್ ಬೇಗ್

Update: 2017-08-14 14:15 GMT

ಚಿಕ್ಕಮಗಳೂರು, ಆ.14: ಅಮಿತ್ ಶಾ ಅಥವಾ ಇನ್ನಾರೇ ಬರಲಿ ಏನೂ ಆಗುವುದಿಲ್ಲ. ಅಂತಹ ಅನೇಕರು
ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಅದರಿಂದ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ಚಿಂತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ರೋಷನ್ ತಿಳಿಸಿದರು.

ಅವರು ಸೋಮವಾರ ನಗರಕ್ಕಾಗವಿುಸಿದ್ದ ಉಸ್ತುವಾರಿ ಸಚಿವರು ಪ್ರವಾಸಿಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದಾಗ ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೂರು ದಿನಗಳ ಕಾಲ ರಣ ತಂತ್ರ ನಡೆಸಿರುವ ಬಗ್ಗೆ ಗಮನ ಸೆಳೆದಾಗ ಈ ರೀತಿ ಪ್ರತಿಕ್ರಿಯಿಸಿದರು. ಅಮಿತ್‌ಷಾ ಆಗಲೀ ಬೇರೆ ಯಾೇ ಆಗಲಿ ಬರುತ್ತಾರೆ ಹೋಗುತ್ತಾರೆ. ಆ ಬಗ್ಗೆ ಕಾಂಗ್ರೇಸ್ ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಹಾರ ಮಾಧರಿಯನ್ನು ಕರ್ನಾಟಕದಲ್ಲಿ ಪ್ರಯೋಗಿಸುವುದಾಗಿ ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೇಸ್ ನವರು ನಿದ್ರೆ ಮಾಡುತ್ತಿಲ್ಲ ಎಂದು ತಿರುಗೇಟುನೀಡಿದರು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂಬ ಜನ ಮನ್ನಣೆ ಗಳಿಸಿದೆ. ಕಾಂಗ್ರೇಸ್ ಪಕ್ಷದ ಬಗ್ಗೆ ರಾಜ್ಯದಜನರ ವಿಶ್ವಾಸವಿದೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬದೃಢ ವಿಶ್ವಾಸವಿದೆ ಎಂದ ಅವರು, ತಾವೇ ಖುದ್ದಾಗಿ ಬರಪೀಡಿತ ಪ್ರದೇಶಗಳಿಗೆತೆರಳಿ ಅಧ್ಯಯನ ನಡೆಸಿ ಪರಿಹಾರ ಕ್ರಮಕ್ಕೆ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.

ತಾವೇ ತಿಳಿಸಿರುವಂತೆ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಿರುವ ಸರ್ಕಾರದ ವಿವಿಧಇಲಾಖೆಗಳಲ್ಲಿ ಖಾಲಿ ಇರುವ ಅಧಿಕಾರಿ ಸಿಬ್ಬಂಧಿಯರ ಹುದ್ದೆಗಳನ್ನು ಭರ್ತಿಮಾಡುವ ಬಗ್ಗೆ ಮುಖ್ಯ ಮಂತ್ರಿಗಳು ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು.

ಅರಣ್ಯ ವಿಹಾರಧಾಮಗಳ ಅಧ್ಯಕ್ಷ ಎ.ಎನ್. ಮಹೇಶ್, ಮಾಜಿ ಎಂಎಲ್‌ಸಿ ಶ್ರೀಮತಿಗಾಂುತ್ರಿ ಶಾಂತೇಗೌಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಸಿ.ಡಿ.ಎ. ಅಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News