ಕಾನೂನು ಅರಿವು-ನೆರವು ಕಾರ್ಯಕ್ರಮ

Update: 2017-08-14 15:50 GMT

ಚಿಕ್ಕಬಳ್ಳಾಪುರ, ಆ.14: ಜವಾಬ್ಧಾರಿಯನ್ನು ಮರೆಯುತ್ತಿರುವ ಮಾನವರು ಕಾನೂನುಗಳು ಸಮಪಕರ್ವಾಗಿ ಪಾಲನೆ ಮಾಡದಿರುವುದರಿಂದ ಸಮಾಜದಲ್ಲಿ ಅಪರಾಧ, ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜು ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಕೇಂಪೇಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಸಿಡ್ ದಾಳಿಗೆ ತುತ್ತಾದ ಸಂತಸ್ಥರಿಗೆ ಕಾನೂನು ಸೇವೆ ಕುರಿತ ಕಾನೂನು ಅರಿವು-ನೆರವು ಕಾಂರ್ುಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಮಾಜಲ್ಲಿ ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಜೀವಿಸಲು ಜ್ಞಾನದ ಜೊತೆಗೆ ಕನಿಷ್ಠ ಕಾನೂನುಗಳನ್ನು ಪಾಲನೆ ಮಾಡಬೇಕಿದೆ ಎಂದರು.

ಕಾನೂನಿನ ಅರಿವನ್ನು ಹೊಂದಿರುವ ಕೆಲವರು ತೋರುವ ನಿರ್ಲಕ್ಷ ಮನೋಭಾವ ಕೂಡ ಹೆಚ್ಚು ಸಮಸ್ಯೆಗಳು ಉಂಟಾಗಲಿದ್ದು, ರಕ್ಷಣೆ ಸೇರಿದಂತೆ ಉತ್ತಮ ಜೀವನಕ್ಕಾಗಿ ರೂಪಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸಂವಿಧಾನದ ಆಶಯಗನ್ನು ಯಶಸ್ವಿಗೊಳಿಸಬೇಕು ಎಂದ ಅವರು, ವಿಜ್ಞಾನ-ತಂತ್ರಜ್ಞಾನ ಬೆಳೆದಿದ್ದರೂ ಇಂದಿಗೂ ಕಾನೂನುಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಸಾಕಷ್ಟು ಮಂದಿಗೆ ಶಿಕ್ಷಣ ಜ್ಞಾನವಿದ್ದರೂ, ಕಾನೂನು ಜ್ಞಾನದ ಕೊರತೆಯಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಕನಿಷ್ಠ ಕಾನೂನು ಅರಿವು ಬೆಳಸಿಕೊಳ್ಳಬೇಕು ಎಂದರು.


ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಅನುಪಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ವಕ್ರದೃಷ್ಠಿಯ ಮನೋಭಾವವುಳ್ಳವರು ತಮ್ಮ ಕ್ಷಣಿಕ ಕೋಪ ಅಥವಾ ದ್ವೇಷದಿಂದ ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡುತ್ತಿದ್ದು, ಇದು ನಾಗರೀಕ ಸಮಾಜ ತಲೆತಗ್ಗಿಸುವ ಘೋರ ಅಪರಾಧವಾಗಿದೆ ಎಂದು ಖಂಡಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯ ಕೃತ್ಯಗಳನ್ನು ತಡೆಯುವ ಸಲುವಾಗಿ ಬಿಗಿ ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ವಿದ್ಯಾರ್ಥಿಗಳು ಇಂತಹ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲ ಕೆ.ಸಿ.ಪ್ರಕಾಶ್ ಅವರು ಆಸಿಡ್ ದಾಳಿಗೊಳಗಾದವರಿಗೆ ಪರಿಹಾರ ಬಗ್ಗೆ ಕಾನೂನು ನೆರವು ಬಗ್ಗೆ ಉಪನ್ಯಾಸ ನೀಡಿದರು. 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎಂ.ಅರುಟಗಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಜಂಟಿ ಕಾರ್ಯದರ್ಶಿ ಜಿ.ಎನ್.

ನರಸಿಂಹಮೂರ್ತಿ, ಖಜಾಂಚಿ ನವೀನ್‌ಕುಮಾರ್, ಪ್ರಾಂಶುಪಾಲೆ ಬಿ.ಜಿ.ಶೋಭಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News