ಪರಿಸರ ಸ್ನೆಹಿ ಗಣೇಶೋತ್ಸವಕ್ಕೆ ಸಹಕರಿಸುವಂತೆ ಮನವಿ

Update: 2017-08-14 15:53 GMT

ಚಿಕ್ಕಬಳ್ಳಾಪುರ, ಆ.14: ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಪಣ ತೊಟ್ಟಿರುವ ನಗರಸಭೆ ಹಾಗೂ ಪೊಲೀಸ್ ಇಲಾಖೆ ಸ್ಥಳೀಯ ನಗರಸಭೆಯ ಎಲ್ಲ ವಾರ್ಡ್‌ಗಳ ಸದಸ್ಯರ ಹಾಗೂ ಸಂಘ, ಸಂಸ್ಥೆಗಳ ಸಭೆ ನಡೆಸಿ ಪರಿಸರ ಸ್ನೆಹಿ ಗಣೇಶೋತ್ಸವಕ್ಕೆ ಸಹಕರಿಸುವಂತೆ ಹಾಗೂ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.

ಈ ಕುರಿತು ನಗರ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಪ್ರಭು ಶಂಕರ್, ಜಿಲ್ಲಾ ಕೇಂದ್ರದಲ್ಲಿ ಗಣೇಶೋತ್ಸವವನ್ನು ಎಲ್ಲರೂ ಶಾಂತಿ ರೀತಿಯಲ್ಲಿ ಸೌಹಾರ್ದಯುತವಾಗಿ ಆಚರಿಸಬೇಕು. ಯಾರೇ ಕಾನೂನು ಕೈಗೆತ್ತಿಕೊಂಡು ಶಾಂತಿಭಂಗ ಉಂಟು ಮಾಡುವ ಕೆಲಸ ಮಾಡಿದರೆ ಆತಂಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಪರಿಸರ ಸ್ನೇಹಿ ಗಣೇಶೋತ್ಸವಕೆ್ಕ ಪ್ರತಿಯೊಬ್ಬರು ಸಹಕರಿಸಬೇಕು ಕೋರಿದರು.

ನಗರದಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗಳನ್ನು ಒಂದೇ ದಿನ ಸಾಮೂಹಿಕವಾಗಿ ವಿಸರ್ಜಿಸಬೇಕೆಂದು ಸಭೆಯಲ್ಲಿ ನಿರ್ಣಯಗೊಳ್ಳಲಾಯಿತು. ಹಬ್ಬದಿಂದ ಕೇವಲ ಆರು ದಿನಗಳ ಮಾತ್ರ ಪ್ರತಿಷ್ಠಾಪನೆ ಮಾಡಬೇಕು. ಆ.30 ರೊಳಗೆ ಎಲ್ಲ ಸಂಘ, ಸಂಸ್ಥೆಗಳು ಗಣೇಶಮೂರ್ತಿಗಳನ್ನು ವಿಸರ್ಜಿಸಬೇಕೆಂದು ಡಿವೈಎಸ್‌ಪಿ ಪ್ರಭುಶಂಕರ್ ಸೂಚಿಸಿದರು. ಹಬ್ಬವನ್ನು ಶಾಂತಿ ರೀತಿಯಲ್ಲಿ ಆಚರಿಸಲು ನಗರಸಭಾ ಸದಸ್ಯರು ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ವಹಿಸಬೇಕೆಂದರು.

ಆರಕ್ಷಕ ವೃತ್ತ ನಿರೀಕ್ಷಕ ಸಿ.ಬಿ. ಶಿವಸ್ವಾಮಿ, ಪಿಎಸ್‌ಐ ರಾಮಪ್ರಸಾದ್, ನಗರಸಭೆ ಆಯುಕ್ತ ಉಮಾಕಾಂತ್, ಮಾಜಿ ನಗರಸಭಾ ಅಧ್ಯಕ್ಷೆ ಕೆ.ವಿ. ಮಂಜುನಾಥ, ಲೀಲಾವತಿ ಶ್ರೀನಿವಾಸ್, ನಗರಸಭಾ ಸದಸ್ಯರಾದ ಮಹಾಕಾಳಿ ಬಾಬು, ಮುನಿಕೃಷ್ಣ, ವೆಂಕಟೇಶ್, ಗಜೇಂದ್ರ, ಪಿ. ಶ್ರೀನಿವಾಸ್ ಸೇರಿದಂತೆ ನಗರಾಭಿವೃದ್ದಿ ಪ್ರಾಧಿಕಾರದ ಮೊಬೈಲ್ ಬಾಬು ಸೇರಿದಂತೆ ಮತ್ತಿತರರು ಸಂಚಾರಿ ಪೊಲೀಸರು ಹಾಗೂ ನಗರ ಠಾಣೆ ಪೊಲೀಸರು ಬೀಟ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News