ವಿವಿಧತೆಯಲ್ಲಿ ಏಕತೆ ಭಾರತದ ವೈಶಿಷ್ಟ್ಯ: ಶಿವು ಮಾದಪ್ಪ ಅಭಿಪ್ರಾಯ

Update: 2017-08-15 15:36 GMT

ಮಡಿಕೇರಿ ಆ.15 : ವಿವಿಧತೆಯಲ್ಲಿ ಏಕತೆ ಭಾರತದ ವೈಶಿಷ್ಟ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ.

 ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 71ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಆರು ಸಾವಿರಕ್ಕೂ ಅಧಿಕ ವಿವಿಧ ಜಾತಿ, ಜನಾಂಗ ಮತ್ತು 1700ಕ್ಕೂ ಹೆಚ್ಚು ಭಾಷಿಕರು ಒಗ್ಗಟ್ಟಾಗಿ ಆಚರಿಸುವ ಏಕೈಕ ರಾಷ್ಟ್ರೀಯ ಹಬ್ಬವೆಂದರೆ ಅದು ನಮ್ಮ ಸ್ವಾತಂತ್ರ್ಯ ದಿನಾಚರಣೆ ಎಂದು ಹರ್ಷ ವ್ಯಕ್ತಪಡಿಸಿದರು. ಇಂದಿನ ಯುವ ಪೀಳಿಗೆ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಸ್ವಾತಂತ್ರ್ಯೋತ್ಸವದ ಧ್ಯೇಯ ಮತ್ತು ಉದ್ದೇಶಗಳನ್ನು ಅರಿತು ದೇಶವನ್ನು ಕಟ್ಟಿ ಬೆಳೆಸಲು ಮುಂದಾಗಬೇಕೆಂದು ಹೇಳಿದರು.

 ರೇಷ್ಮೆ ಮಾರಾಟ ನಿಗಮದ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ತಂದು ಕೊಡುವಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಪಾತ್ರ ವಹಿಸಿರುವುದು ಹೆಮ್ಮೆಯ ವಿಚಾರವೆಂದರು. 

 ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸೇವಾದಳ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ, ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ತಜುಸುಂ, ಜುಲೇಕಾಬಿ, ಕೆ.ಎಂ.ವೆಂಕಟೇಶ್, ಉದಯಕುಮಾರ್, ಎಂ.ಎ.ಉಸ್ಮಾನ್ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್, ಇಸ್ಮಾಯಿಲ್, ಎಂ.ಎ.ಹನೀಪ್, ಪುಲಿಯಂಡ ಜಗದೀಶ್, ಪ್ರಭುರೈ, ಹೆಚ್.ಪಿ.ಚಂದ್ರು, ಹೆಚ್.ಎಂ.ಮಹದೇವ, ಶರಣ್ ನಂಜಪ್ಪ, ಡಿ.ಎಲ್.ಸುಬ್ಬಯ್ಯ, ಪೂಣಚ್ಚ, ಟಿ.ಪಿ.ನಾಣಯ್ಯ, ಬಂಧಿಖಾನೆ ಸಮಿತಿ ಸದಸ್ಯರಾದ ಹನೀಪ್, ವಿಜಯ, ಜಫ್ರುಲ್ಲಾ, ರಾಣಿ, ಶೇಖ್ ಅಹಮ್ಮದ್, ಪ್ರೇಮ ಕೃಷ್ಣಪ್ಪ, ಅಭಿನ್, ಜಾನ್ಸ್‍ನ್ ಪಿಂಟೋ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News