×
Ad

1750 ಅಡಿ ಉದ್ದದ ತ್ರಿವರ್ಣ ರಾಷ್ಟ್ರಧ್ವಜ ಮೆರವಣಿಗೆಗೆ ಎ. ಮಂಜು ಚಾಲನೆ

Update: 2017-08-15 22:22 IST

ಹಾಸನ: 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್‍ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ 1750 ಅಡಿ ಉದ್ದದ ತ್ರಿವರ್ಣ ರಾಷ್ಟ್ರಧ್ವಜ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಚಾಲನೆ, ಶಾಸಕ ಹೆಚ್.ಎಸ್. ಪ್ರಕಾಶ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಚಾಲನೆ  ನೀಡಿದರು. 

     ಶಾಂತಿಗಾಗಿ ನಡಿಗೆ ಶ್ರೇಷ್ಠ ಭಾರತದೆಡೆಗೆ ಎಂಬ ನಡಿಗೆಯನ್ನು ಸ್ವಾತಂತ್ರ ದಿನದಂದು 1750 ಅಡಿ ಉದ್ದದ ತ್ರಿವರ್ಣ ರಾಷ್ಟ್ರಧ್ವಜದ ಮೂಲಕ ಆಚರಿಸಿದರು. ರಾಷ್ಟ್ರಧ್ವಜ ದೇಶದ ಹೆಮ್ಮೆಯ ಸಂಕೇತ. ಯುವ ಪೀಳಿಗೆಗೆ ರಾಷ್ಟ್ರಧ್ವಜ, ರಾಷ್ಟ್ರಭಕ್ತಿ ಹಾಗೂ ದೇಶ ಪ್ರೇಮ ಮೂಡಿಸುವ ಉದ್ದೇಶದಿಂದ ಆಂಧ್ರ  ಪ್ರದೇಶದ ರೊದ್ದಂ ತಾಲ್ಲೂಕಿನಿಂದ ತಂಡ ತ್ರಿವರ್ಣ ತರಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾಗಿ, ಎನ್.ಆರ್.ವತ್ತದ ಮೂಲಕ, ದೇವಿಗೆರೆ ಸರ್ಕಲ್, ಕಸ್ತೂರ ಬಾ ರಸ್ತೆ, ಸಾಲಗಾಮೆ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣ ಪ್ರವೇಶ ಮಾಡಿತು. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

      ಇದೆ ವೇಳೆ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್ ಜಿಲ್ಲಾ ಘಕಟದ ಹೆಚ್.ಜೆ. ಬಾಲಾಜಿ, ಹಿರಿಯ ಸದಸ್ಯ ನಟೇಶ್, ಕಾರ್ಯದರ್ಶಿ ಎಸ್.ಆರ್. ಮನು, ಸದಸ್ಯರಾದ ನಟೇಶ್, ಖಜಾಂಚಿ ಜಗದೀಶ್, ನಾಗೇಶ್, ಹರೀಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News