×
Ad

ಸರ್ಕಾರದ ಬೇಜವಾಬ್ದಾರಿತನಕ್ಕೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ: ಶಾಸಕ ಮಧು ಬಂಗಾರಪ್ಪ

Update: 2017-08-15 23:24 IST

ಸೊರಬ, ಆ. 15: ಸರ್ಕಾರದ ಬೇಜವಾಬ್ದಾರಿತನಕ್ಕೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಶಾಸಕ ಮಧು ಬಂಗಾರಪ್ಪ ಬೇಸರವ್ಯಕ್ತಪಡಿಸಿದರು.

ಸೋಮವಾರ ತಡರಾತ್ರಿ ಪಟ್ಟಣದ ಮುಖ್ಯರಸ್ತೆಯ ಮಾರ್ಗವಾಗಿ ತಮ್ಮ ನಿವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಳೆವಿಮೆ ಪಾವತಿಸಲು ಖಾಸಗಿ ಎಜೆನ್ಸಿಕೆಂದ್ರಗಳ ಮುಂದೆ ಸರದಿಸಾಲಿನಲ್ಲಿ ನಿಂತ ರೈತರ ನೂಕು ನುಗ್ಗಲು ಕಂಡು ಭೇಟಿ ನೀಡಿ ಕಳವಳ ವ್ಯಕ್ತಪಡಿಸಿ, ಅವರು ಮಾತನಾಡಿ ಸರ್ಕಾರ ಕೊಡಲೆ ರೈತರ ಬೆಳೆವಿಮೆ ಕಂತು ತುಂಬುವ ದಿನಾಂಕವನ್ನು ವಿಸ್ತರಿಸಬೇಕೆಂದು ವತ್ತಾಯಿಸಿದರು.
ಬೆಳೆವಿಮೆಕಂತು ತುಂಬಲು ಅಗಷ್ಟ 14ರ ಸೊಮವಾರ ಕೊನೆದಿನವಾಗಿದ್ದು, ರಾತ್ರಿ 12ಗಂಟೆಯವರೆಗೂ ಕಾದು ಕುಳಿತಿದ್ದ ನೂರಾರು ರೈತರು ಕಂತನ್ನು ಕಟ್ಟಲು ಸಾದ್ಯವಾಗದೆ ತಮ್ಮ ಗ್ರಾಮಗಳಿಗೆ ವಾಪಸ್‍ತೆರಳುವಂತಾಗಿದೆ. ಕೇವಲ ತಾಲೂಕು ಮಾತ್ರವಲ್ಲದೆ ರಾಜ್ಯಾದ್ಯಂತ ಇಂದೆ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ವರ್ಷಗಳಿಂದ ರೈತರು ಬರಗಾಲದಿಂದ ರೋಸಿಹೊಗಿದ್ದಾರೆ. ಪ್ರಸಕ್ತ ವರ್ಷವೂ ಮಳೆಯಿಲ್ಲದೆ ಭೀಕರ ಬರಗಾಲದ ಮುನ್ಸೂಚನೆ ಕಂಡು ಬಂದಿದ್ದು, ಬೆಳೆವಿಮೆ ಕಂತನ್ನು ಪಾವತಿಸಲು ತಂಡೋಪತಂಡವಾಗಿ ಖಾಸಗಿ ಎಜೆನ್ಸಿ ಬೆಳೆವಿಮಾ ಕೆಂದ್ರಗಳಿಗೆ ರೈತರು ಅಲದಾಡುವಂತಾಗಿದೆ. ಈ ಕುರಿತಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಂಪರ್ಕಿಸಲಾಗಿದ್ದು, ರೈತರಿಗೆ ಅನುಕೂಲವಾಗುವಂತೆ ಬೆಳೆವಿಮೆ ಕಂತು ತುಂಬಲು ಅವಧಿ ಮುಂದುವರೆಸುವಂತೆ ವಿನಂತಿಸಿಕೊಂಡಿದ್ದೇನೆ ಸಚಿವರೂ ಸಹ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News