ಕಾಂಗ್ರೆಸ್‍ನಿಂದ ಗಣೇಶ್, ಶೇಷಮ್ಮ 6 ವರ್ಷ ಅಮಾನತು

Update: 2017-08-16 13:33 GMT

ಮಡಿಕೇರಿ, ಆ.16 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ನಗರಸಭೆಗೆ ಚುನಾಯಿತರಾದ ಕೆ.ಎಂ.ಗಣೇಶ್ ಹಾಗೂ ಶೇಷಮ್ಮ (ಲೀಲಾ) ಅವರು ಮಡಿಕೇರಿ ನಗರಸಭೆಯ ಸದಸ್ಯರಾಗಿದ್ದು, ತಮ್ಮನ್ನು ಚುನಾಯಿಸಿರುವ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಇತ್ತೀಚೆಗೆ ಜಾತ್ಯಾತೀತ ಜನತಾದಳವನ್ನು ಸೇರುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.

ಈ ಕಾರಣದಿಂದ ಇಬ್ಬರನ್ನು ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ 1987 ರಡಿಯಲ್ಲಿ ನಗರಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ನಗರಸಭೆಯ ಆಯುಕ್ತರ ಮೂಲಕ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ಶಿವು ಮಾದಪ್ಪ ದೂರು ಸಲ್ಲಿಸಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ತಿಳಿಸಿದ್ದಾರೆ.

ಇಬ್ಬರ ಅಮಾನತು

ಮಡಿಕೇರಿ ನಗರಸಭೆಯ ಸದಸ್ಯರುಗಳಾದ ಕೆ.ಎಂ.ಗಣೇಶ್ ಕಾಂಗ್ರೆಸ್ ಸದಸ್ಯತ್ವ ಸಂಖ್ಯೆ 188591 ಮತ್ತು ಶೇಷಮ್ಮ (ಲೀಲಾ) ಸದಸ್ಯತ್ವ ಸಂಖ್ಯೆ 187655 ಇವರುಗಳನ್ನು ಕಾಂಗ್ರೆಸ್ ಪಕ್ಷದಿಂದ ಮುಂದಿನ 6 ವರ್ಷಗಳವರೆಗೆ ಅಮಾನತುಗೊಳಿಸಿ ಜಿಲ್ಲಾಧ್ಯಕ್ಷರು ಆದೇಶಿಸಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News