ಶಿಷ್ಠ ಸಾಹಿತ್ಯಕ್ಕೆ ಇರುವ ಮಾನ್ಯತೆ, ಜಾನಪದಕ್ಕೆ ದೊರೆಯಬೇಕು: ಡಾ. ಎಸ್.ಬಾಲಾಜಿ

Update: 2017-08-16 13:40 GMT

ಚಿಕ್ಕಮಗಳೂರು ಆ.16: ಕವಿಗಳಿಗೆ ನೀಡಿರುವ ಸ್ಥಾನವನ್ನು ಜನಪದ ಕಲಾವಿದರಿಗೆ ನೀಡುತ್ತಿಲ್ಲ. ಉನ್ನತ ಮಟ್ಟದ ಪ್ರಶಸ್ತಿಗಳನ್ನು ನೀಡುವಾಗ ಜನಪದ ಕಲಾವಿದರನ್ನು ಸಹ ಪರಿಗಣಿಸಬೇಕಾಗಿದೆ ಎಂದು ಜನಪದ ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ. ಎಸ್. ಬಾಲಾಜಿ ಅವರು ತಿಳಿಸಿದರು.

 ಅವರು ತಾಲ್ಲೂಕು ಜಾನಪದ ಪರಿಷತ್ ಉದ್ಘಾಟನೆಯ ಸಂದರ್ಭದಲ್ಲಿ ಬೀಕನಹಳ್ಳಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಕಲಾವಿದ ಬೀಕನಹಳ್ಳಿ ಬಸವರಾಜ್ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಷ್ಠ ಸಾಹಿತ್ಯಕ್ಕೆ ಇರುವ ಮಾನ್ಯತೆ, ಜಾನಪದಕ್ಕೆ ದೊರೆಯಬೇಕು, ಕನ್ನಡ ಜನಪದ ಸಾಹಿತ್ಯಕ್ಕೆ ಪಠ್ಯಕ್ರಮದಲ್ಲಿ ಹೆಚ್ಚಿನ ಸ್ಥಾನ ನೀಡಬೇಕು, ಪ್ರಾಥಮಿಕ ಹಂತದಿಂದಲೂ ಅಳವಡಿಸುವುದರಿಂದ ಮಕ್ಕಳು ಜನಪದ ಸಾಹಿತ್ಯದೊಂದಿಗೆ ಬೆಳೆಯಲು ಅನುಕೂಲವಾಗುವುದು ಎಂದು ನುಡಿದರು.

  ಸಾಕಷ್ಟು ಜಾನಪದ ನಾಟಕಗಳನ್ನು ನಿರ್ದೇಶಿಸುತ್ತಾ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಬಸವರಾಜ್ ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣ. ಬಸವರಾಜ್ ಅವರಂತಹ ನಿಸ್ವಾರ್ಥ ಕಲಾವಿದರನ್ನು ಸ್ಮರಿಸುತ್ತಾ ನಾವು ಇನ್ನು ಅನೇಕ ಕಾರ್ಯಕ್ರವಗಳನ್ನು ಮುಂದೆಯು ನಡೆಸುತ್ತೇವೆ.  ಜನಪದ ಕಲೆಗಳು ಮಕ್ಕಳಿಗೆ ತಲುಪಬೇಕು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಜನಪದ ಸಮ್ಮೇಳನಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

  ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಮ್ಮ ತಂದೆಯೊಂದಿಗೆ ಬಸವರಾಜ್ ಅವರ ಒಡನಾಟವನ್ನು ಸ್ಮರಿಸಿಕೊಂಡರು. ಅಜ್ನಾತ ಕವಿಗಳ ಅಮರ ಕಾವ್ಯ ಎಂದರೆ ಜನಪದ ಕಾವ್ಯ, ಆದರೆ ನಾವು ಇದನ್ನು ದಾಖಲೆ ಮಾಡುವ ಕೆಲಸ ಮಾಡುತ್ತಿದ್ದೇವೆ ಇದರಿಂದ ಮುಂದಿನ ಜನಾಂಗಕ್ಕೆ ಇವು ಲಬ್ಯವಾಗುವ ಸಾಧ್ಯತೆ ಇರುತ್ತದೆ ಎಂದರು.

  ಜಾನಪದ ಕಲಾವಿದರಾದ ಬಿಸಲೇಹಳ್ಳಿ ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದÀರು.

  ಕಾರ್ಯಕ್ರಮದಲ್ಲಿ ಶ್ರೀಮತಿ ಪದ್ಮಾ ತಿಮ್ಮೇಗೌಡ, ಮುಖ್ಯಶಿಕ್ಷಕಿ ಶ್ರೀಮತಿ ಆರ್.ಸಿ.ವಿಮಲಾಕ್ಷಿ, ಶ್ರೀಮತಿ ಭಾರತೀ ಶಿವರುದ್ರಪ್ಪ, ನಿವೃತ್ತ ಎಎಸ್‍ಐ ವಿಶ್ವನಾಥ್, ಲೇಖಕಿ ಶಾಂತಿ ಸರೋಜಿನಿ, ನಳಿನ ಡಿ, ನಿವೃತ್ತ ಶಿಕ್ಷಕ ಬೀರೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News