ಎಲ್ಲಾ ಕೆರೆಗಳಿಗೂ ನೀರು ಹರಿಸಿ,ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟನೆ : ಶಾಸಕ ಎಸ್.ಆರ್.ಶ್ರೀನಿವಾಸ್ ಎಚ್ಚರಿಕೆ

Update: 2017-08-16 14:35 GMT

ಗುಬ್ಬಿ,ಆ.16:ತಾಲೂಕಿನ ಎಲ್ಲಾ ಕೆರೆಗಳಿಗೂ ಸಮಗ್ರವಾಗಿ ನೀರು ಹರಿಸದಿದ್ದರೆ ಪಕ್ಷಾತೀತವಾಗಿ ರಸ್ತೆ ತಡೆ ಚಳುವಳಿ ಮಾಡಲಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಮಣ್ಣಮ್ಮ ದೇವಾಸ್ಥಾನದ ಆವರಣದಲ್ಲಿ ತಾಲೂಕು ಜೆಡಿಎಸ್ ಘಟಕ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ‘ನಮ್ಮ ಪಂಚಾಯಿತಿ ಸ್ವಚ್ಛ ಪಂಚಾಯಿತಿ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ತಾಲೂಕಿಗೆ  ಜಿಲ್ಲಾ ಕೆಡಿಪಿ ಸಭೆಯಲ್ಲಿ ನಿರ್ಣಯವಾಗಿರುವಂತೆ 25 ದಿನಗಳ ಕಾ¯ ಎಲ್ಲಾ  ಕೆರೆಗಳಿಗೂ ಶೇ.40 ರಷ್ಟು ನೀರನ್ನು ಹÀರಿಸಬೇಕು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು,ವಿದ್ಯುತ್ ಸಂಪರ್ಕ ಕೊಡುವುದು ಬಾಕಿ ಇರುವುದರಿಂದ ಬೆಸ್ಕಾಂ ಅಧಿಕಾರಿಗಳನ್ನು ಸಭೆ ಕರೆದು ತ್ವರಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಸೂಚಿಸಿದ್ದೇನೆ.ಕುಡಿಯುವ ನೀರಿಗಾಗಿ ವ್ಯಯ ಮಾಡಿರುವ 20.50 ಕೋಟಿ ರೂಗಳನ್ನು ಸರಕಾರ ಬಿಡುಗಡೆ ಮಾಡಲ್ಲ. ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿಕೊಂಡಿರುವ ರೈತರಿಗೆ ವಿದ್ಯುತ್ ಕಡಿತ ಮಾಡಿ ಎಂದು ಜಿಲ್ಲಾಡಳಿತ ಸೂಚಿಸಿದೆ.ಆದರೆ  ತಾಲೂಕಿನಲ್ಲಿ 17 ಕೆರೆಗಳಿಗೆ ರೈತರೆ ಸ್ವತ ಹಣದಿಂದ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆಳವಡಿಸಿಕೊಂಡಿರುವ ವಿದ್ಯುತ್‍ನ್ನು ಕಡಿತಗೊಳಿಸಕೂಡದು.ಹೇಮೆ ನೀರು ತಾಲ್ಲೂಕಿಗೆ ಬಂದಾಗಿನಿಂದ 63 ಕೆರೆಗಳು ತುಂಬತ್ತಾ ಬಂದಿವೆ ಈ ಭಾರಿ ಕೆರೆಗಳನ್ನು ತುಂಬಿಸುವಲ್ಲಿ ಲೋಪವಾದರೆ ಪಕ್ಷಾತೀತವಾಗಿ ಪ್ರತಿಭಟನೆ  ಮಾಡುತ್ತೇವೆ.ರೈತರಿಗೆ ಗೊಂದಲ ಸೃಷ್ಟಿಸದೆ ಜಿಲ್ಲಾಡಳಿತ ಸ್ಪಷ್ಟವಾಗಿ ನಿಯವiಗಳ ಬಗ್ಗೆ ತಿಳಿಸಬೇಕು, ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನಲ್ಲಿ ನೀರಿಗಾಗಿ ಹೋರಾಟಗಳು ನಡೆಯುತ್ತಿದ್ದರು ಇದರ ಬಗ್ಗೆ ಕಂಡು ಕಾಣದಂತೆ  ವರ್ತಿಸುತ್ತಿರುವುದು ಸರಿಯಲ್ಲ. ಕಡಬ, ಗುಬ್ಬಿ, ಮೂಕನಹಳ್ಳಿ ಪಟ್ಟಣದ ಕೆರೆಗಳಿಗೆ ಪ್ರತ್ಯೇಕ ಚಾನಲ್ ನಿರ್ಮಾಣ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.

ಗುಬ್ಬಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 24 ಗ್ರಾಮ ಪಂಚಾಯಿತಿಗಳಲ್ಲೂ ಸ್ವಚ್ಛತ ಅಭಿಯಾನ ಮಾಡಲಾಗುತ್ತದೆ. ಪ್ರತಿಯೊಬ್ಬರು ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಿದ್ದು,ಪ್ರತಿ ಗ್ರಾಮದಲ್ಲೂ ಸ್ವಚ್ಛತೆ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತದೆ.  ನೈರ್ಮಲ್ಯ ಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಅಭಿಯಾನದಲ್ಲಿ ಎಪಿಎಂಸಿ ಅಧ್ಯಕ್ಷ ಕಳ್ಳಿಪಾಳ್ಯ ಲೊಕೇಶ್,ರೇವಣ್ಣ, ಲಕ್ಷ್ಮಿರಂಗಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಗುರುರೇಣುಕರಾಧ್ಯ ಪ.ಪಂ ಸದಸ್ಯ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಗ್ರಾ.ಪಂ.ಅಧ್ಯಕ್ಷ ಸಿದ್ದಲಿಂಗಯ್ಯ,  ನರಸಿಂಹಮೂರ್ತಿ, ಚಂದ್ರಶೇಖರ್,ಯೋಗಾನಂದ್, ವೆಂಕಟೇಶ್, ಸತೀಶ್, ಗುರುಸ್ವಾಮಿ, ಮಹಾದೇವಯ್ಯ, ಲಕ್ಷ್ಮಿಕಾಂತ್, ಭಾರತಿಶ್ರೀನಿವಾಸ್, ಭಾಗ್ಯ, ಜೆಡಿಎಸ್ ಯುವ ಮುಖಂಡ ದುಶ್ಯಾಂತ್, ಲಕ್ಷ್ಮಯ್ಯ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News