ಜೆ.ಸಿ.ಐ ಸೊರಬ ವೈಜಯಂತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2017-08-16 14:44 GMT

ಸೊರಬ,ಆ.16: ದೇಶವು ಬಡತನ ಮುಕ್ತವಾಗಬೇಕು, ಸಮಾನತೆಯನ್ನು ಕಾಯ್ದುಕೊಳ್ಳಲು ಜನರ ಸಹಕಾರ ಅಗತ್ಯವಿದೆ ಎಂದು ಜೆ ಸಿ ಐ ಸೊರಬ ವೈಜಯಂತಿ ಅಧ್ಯಕ್ಷ ಸಿ ಪಿ ಈರೇಶ್ ಗೌಡ  ಹೇಳಿದರು.

ವಿಶೇಷವಾಗಿ ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಕುದುರೆ ಗಣಿ ಕ್ಯಾಂಪ್‍ನವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ, ಅಲ್ಲಿನ ಮಕ್ಕಳಿಗೆ ಶಿಕ್ಷಣ ಪೂರಕ ಸಾಮಾಗ್ರಿಗಳನ್ನು ಕೊಡುಗೆಯಾಗಿ ವಿತರಿಸಿ ಮಾತನಾಡಿದರು.

ಘಟಕದ ಮೋಹನ್ ಸುರಭಿ ಮಾತನಾಡಿ, ಅಲೆದಾಟದ ಜೀವನದಿಂದ ಈ ಅಲೆಮಾರಿ ಜನಾಂಗದವರಿಗೆ ಒಂದೆಡೆ ನೆಲೆನಿಲ್ಲುವಂತೆ ವ್ಯವಸ್ಥೆಯಾಗಿದೆ. ಆದರೆ, ಅನೇಕ ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ಇವರ ನೆರವಿಗೆ ಸರ್ಕಾರವಲ್ಲದೆ ಸಂಘಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

ಜೆಸಿಐ ವಲಯ ಉಪಾಧ್ಯಕ್ಷ ವಾಸುದೇವ್ ರಾವ್ ಬೆನ್ನೂರ್ , ಘಟಕ ಉಪಾಧ್ಯಕ್ಷ ದೊಡ್ಮನೆ ಪ್ರಶಾಂತ್ ,ಜೆಸಿ ಮೋಹನ್, ಜೆಸಿ ಅನಿಲ್ ಬೇಕರಿ, ರಾಮು ಪಿ, ಸ್ಥಳೀಯ ಮುಖಂಡರಾದ ಹನುಮಂತಪ್ಪ, ನಾಗರಾಜ್ ಇನ್ನೂ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News