ಜನ, ಜಾನುವಾರುಗಳ ರಕ್ಷಣೆಗಾಗಿ ಪರ್ಜನ್ಯ ಯಾಗ

Update: 2017-08-16 16:23 GMT

ಶಿಡ್ಲಘಟ್ಟ,ಆ.16 : ತಾಲ್ಲೂಕಿನಾದ್ಯಂತೆ ಮಳೆಗಾಗಿ ಪ್ರಾರ್ಥಿಸಿ ಜನ, ಜಾನುವಾರುಗಳ ರಕ್ಷಣೆಗಾಗಿ ಪರ್ಜನ್ಯ ಯಾಗವನ್ನು ಶ್ರೀ ಎಚ್.ಡಿ ದೇವೇಗೌಡಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಬಶೆಟ್ಟಹಳ್ಳಿ ಪಂಚಾಯ್ತಿಯ ನಲ್ಲರಾಳಹಳ್ಳಿಯ ಚಾಮುಂಡೇಶ್ವರಿ ದೇವಾಲಯದಲ್ಲಿ ಬುಧವಾರ ಟ್ರಸ್ಟ್ ವತಿಯಿಂದ ನಡೆಸಿದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಈಗಾಗಲೇ ಮುಂಗಾರು ಮಳೆ ಕ್ಷೀಣಿಸಿದೆ. ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರಿದೆ. ನೀರಿನ ತೊಂದರೆ ಕೂಡ ಅಧಿಕವಾಗಿದೆ. ಹಿಂದೆ ಬರಗಾಲ ಬಂದಾಗ ಪ್ರಕೃತಿ ಮಾತೆಯನ್ನು ಒಲಿಸಿಕೊಳ್ಳಲು ಪೂಜೆ, ಹೋಮ, ಹವನಗಳನ್ನು ನಡೆಸುತ್ತಿದ್ದರು. ಹಿರಿಯ ಅದೇ ಮಾದರಿಯಲ್ಲಿ ಗುರುವಾರದಿಂದ ಐದು ದಿನಗಳ ಕಾಲ ಪರ್ಜನ್ಯ ಯಾಗವನ್ನು ನಡೆಸುತ್ತಿದ್ದೇವೆ. ಆಗಸ್ಟ್ 21ರ ಸೋಮವಾರದಂದು ಪೂರ್ಣಾಹುತಿಯನ್ನು ನೀಡಲಿದ್ದೇವೆ. ಪೂರ್ಣಾಹುತಿಯಂದು ನೀಡುವ ಹವಿಸ್ಸಿನಿಂದ ಮತ್ತು ಯಾಗದ ಹೊಗೆಯಿಂದ ಹೊರಡುವ ಸಕಾರಾತ್ಮಕ ಶಕ್ತಿ ತರಂಗಗಳು ಸರ್ವರಿಗೂ ಮಂಗಳ ತರುತ್ತದೆ. ಎಲ್ಲಾ ಜೀವ ಜಂತುಗಳ  ಒಳಿತಿಗಾಗಿ ನಡೆಸುತ್ತಿರುವ ಈ ಯಾಗಕ್ಕೆ ಪಕ್ಷ ಬೇಧ ಮರೆತು ಎಲ್ಲಾ ಜನರೂ ಭಾಗವಹಿಸುವಂತೆ ಕೋರಿದರು.

 ಈ ಭಾಗದಲ್ಲಿ ನೀರಿನ ಅಭಾವದಿಂದ ಜನರು ಬಹಳ ಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಮಳೆ ಬೆಳೆಯಾದರೆ ಜನರು ಬೇರೇನನ್ನೂ ಕೇಳುವುದಿಲ್ಲ. ದೈವಾನುಗ್ರಹಕ್ಕಾಗಿ ಎಲ್ಲರೂ ಒಗ್ಗೂಡೋಣ ಎಂದರು.

 ಪ್ರಧಾನ ಅರ್ಚಕ ಗಿರೀಶ್ ಮಾತನಾಡಿ, ಪರಶುರಾಮ ಪ್ರತಿಷ್ಠಾಪಿತ ತ್ರಿಶಕ್ತಿ ಸಂಗಮದ ಚಾಮುಂಡೇಶ್ವರಿ ದೇವಿಯ ಈ ಕ್ಷೇತ್ರ ಕ್ಷಿಪ್ರ ಪ್ರಸಾದಿನಿ ಕ್ಷೇತ್ರವೆಂದೇ ಹೆಸರಾಗಿದೆ. ಇಲ್ಲಿ ನಡೆಸುವ ಯಾಗದಿಂದ ತಾಲ್ಲೂಕಿನ ಜನರಿಗೆ ಒಳ್ಳೆಯದಾಗಲಿ ಎಂದರು.

 ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ದೊಣ್ಣಹಳ್ಳಿ ರಾಮಣ್ಣ, ವೆಂಕಟೇಶ್ ಮಾತನಾಡಿದರು.

 ತಿಮ್ಮನಾಯಕನಹಳ್ಳಿ ರಮೇಶ್, ಆದಿಲ್‍ಪಾಷ, ಸಾದಲಿ ಚಲಪತಿ, ನಂಜಪ್ಪ, ರಾಮಾಂಜಿನಪ್ಪ, ರಾಜಶೇಖರ್, ಗೋಪಾಲಗೌಡ, ಕೆ.ಎಸ್.ಮಂಜುನಾಥ್,ರಾಮಚಂದ್ರ, ಲಕ್ಷ್ಮಣ, ಲಕ್ಕಹಳ್ಳಿ ರಾಮಾಂಜನೇಯುಲು, ಶ್ರೀನಿವಾಸರೆಡ್ಡಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News