ಚಿಕ್ಕ ಕೆರೆಯ ಸುತ್ತ ಗೋಡೆಯನ್ನು ನಿರ್ಮಿಸಲು ಗ್ರಾಮಸ್ಥರ ಆಗ್ರಹ

Update: 2017-08-16 16:50 GMT

ಹನೂರು,ಆ.16 : ಪಟ್ಟಣದ ಆರ್.ಎಸ್‍ ದೊಡ್ಡಿ ಬಳಿಯ ಚಿಕ್ಕ ಕೆರೆಯು ತುಂಬಿದ್ದು , ಈ ಕೆರೆಯ ಸುತ್ತ ಗೋಡೆಗಳನ್ನು ನಿರ್ಮಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

ಈ ಚಿಕ್ಕಕೆರೆಯ ಸಮೀಪದಲ್ಲಿಯೇ ಕೊಳ್ಳೇಗಾಲ ಮತ್ತು ಮಹದೇಶ್ವರ ಬೆಟ್ಟ ಹಾಗೂ ತಮಿಳುನಾಡು ರಾಜ್ಯಕ್ಕೆ ತೆರಳುವ ಹೆದ್ದಾರಿಯು ಇದ್ದು, ಈ ಕೆರೆಯ ಬಳಿ ದಿನಕ್ಕೆ ನೂರಾರು ವಾಹನಗಳು ಇಲ್ಲಿ ಚಲಿಸುತ್ತವೆ. ಕ್ಷೇತ್ರ ವ್ಯಾಪ್ತಿಯ ಹನೂರುಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಕಳೆದ ಒಂದು ವಾರಗಳಿಂದ ಬಾರೀ ಮಳೆಯಾಗುತ್ತಿದ್ದು, ಪರಿಣಾಮ ಎರಡು ಕೆರೆಗಳು ತುಂಬಿದ್ದು . ಅದ್ದರಲ್ಲೂ ಚಿಕ್ಕಕೆರೆಯು ಹೆದ್ದಾರಿ ಬಳಿ ಇದ್ದು . .. ದಿನ ನಿತ್ಯ ಸಾವಿರಾರು ದ್ವಿಚಕ್ರ ವಾಹನ ಸವಾರರು, ಶಾಲೆ ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ.

ರಾತ್ರಿಯ ಸಮಯದಲ್ಲಿ ರಸ್ತೆಯ ಬಳಿಯ ಕೆರೆ ಇರುವ ಚಿತ್ರಣ ಅರಿಯದ ವಾಹನ ಸವಾರರು ಮತ್ತು ಪಾದಚಾರಿಗಳಲ್ಲಿ ಅತ್ಯಂತ ಜೋಪಾನವಾಗಿ ತಿರುಗಾಡುವ ಆತಂಕ ಸೃಷ್ಠಿಯಾಗಿದೆ.

ಅಂಗಡಿ ಮುಂಗಟ್ಟಿಗೆ ನುಗ್ಗಿದ ನೀರು : ಕಳೆದ ವಾರಗಳಿಂದ ಸುರಿಯುತ್ತಿರುವ ಮಳೆಗೆ ಪಟ್ಟಣದ ಆರ್‍.ಎಸ್‍.ದೊಡ್ಡಿಯ ದೊಡ್ಡಕೆರೆ ಹಾಗೂ ಚಿಕ್ಕಕೆರೆಯು ತುಂಬಿದ್ದು, ಸಮೀಪದ ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿದೆ.

ಪಟ್ಟಣ ಪಂಚಾಯತ್  ಸಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು  ಭೇಟಿ ನೀಡಿ, ಈ ಕೆರೆಯ ವಾಸ್ತವ ಸ್ಥಿತಿಯನ್ನು ಅರಿತು ಮುಂದೆ ಆಗಬಹದಾದ ಅವಘಡಗಳನ್ನು ತಪ್ಪಿಸುವ ಸಲುವಾಗಿ ಅಭಿವೃದ್ದಿ ಪಡಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ .

ಕಳೆದ ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು ಅದ್ದರಲ್ಲೂ ನಮ್ಮ ಕೆರೆಗಳೂ ಭರ್ತಿಯಾಗಿರುವದು ತುಂಬಾ ಸಂತಸತಂದಿದೆ. ಆದರೆ ಚಿಕ್ಕಕೆರೆಯ ಬಳಿ ಮುಖ್ಯರಸ್ತೆ ಇರುವುದ್ದರಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ನಮ್ಮಜನ ಪ್ರತಿನಿಧಿಗಳು ಇದ್ದಕ್ಕೆ ಸುತ್ತುಗೋಡೆ ನಿರ್ಮಿಸಿ ಇದ್ದನ್ನುಅಭಿವೃದ್ದಿ ಮಾಡಬೇಕಾಗಿದೆ ಎಂದು ಆಗ್ರಹಿಸಿದರು .

-ರಮೇಶ್‍ ಕುಮಾರ್,ಆರ್.ಎಸ್‍.ದೊಡ್ಡಿಯ ನಿವಾಸಿ

ಸೂಕ್ತ ಮೇಲ್ಛಾವಣಿ  ವ್ಯವಸ್ಥೆಯನ್ನು ಮತ್ತು ಕೆರೆಯ ಸುತ್ತ  ವಿದ್ಯುತ್ ದೀಪದವನ್ನು ಅಳವಡಿಸಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಅಬಿವೃದ್ದಿಗೆ ಮುಂದಾಗ ಬೇಕಾಗಿ ಆಗ್ರಹಿಸಿದ್ದಾರೆ .

- ನವೀನ್‍ ಕುಮಾರ್‍ ಗೌಡ, ಹನೂರು ನಿವಾಸಿ 

ಚಿಕ್ಕಕೆರೆಯ ಸುತ್ತ ಸುತ್ತುಗೋಡೆ ನಿರ್ಮಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದ್ದು ರಸ್ತೆಅಗಲೀಕರಣದ ನಂತರ ಸುತ್ತಸುತ್ತುಗೊಡೆಗಳನ್ನು ನಿರ್ಮಿಸಲು ಸೂಕ್ತ ಕ್ರಮಜರುಗಿಸಲಾಗುವುದು

- ಮೋಹನ್ ಕೃಷ್ಣ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು

Writer - ವರದಿ: ಅಭಿಲಾಷ್ ಟಿ

contributor

Editor - ವರದಿ: ಅಭಿಲಾಷ್ ಟಿ

contributor

Similar News