ಬಯಲು ಶೌಚ ಮುಕ್ತ ನಗರ : ಹಾಸನ ನಗರಸಭೆಗೆ ಪ್ರಶಸ್ತಿ
ಹಾಸನ,ಆ.16: ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಆಯ್ದ 7 ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಛ ಬಯಲು ಶೌಚ ಮುಕ್ತ ಘೋಷಣೆಯಂತೆ ಹಾಸನ ನಗರಸಭೆಗೆ ಪ್ರಮಾಣ ಪತ್ರ ವಿತರಿಸಿದ್ದಾರೆ ಎಂದು ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತ ನಗರಗಳಾಗಿ ಘೋಷಣೆಯಾಗಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಮೈಸೂರು, ಮಂಗಳೂರು ಹಾಗೂ ಉಡುಪಿಯನ್ನು ಓಡಿಎಫ್ ನಗರಗಳಾಗಿ ಘೋಷಣೆಯಾಗಿದೆ. ಒಟ್ಟು 7 ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚ ಮುಕ್ತ ನಗರಗಳಾಗಿ 2017 ಜುಲೈ ಘೋಷಣೆ ಮಾಡಲಾಗಿದೆ. ಇದರಲ್ಲಿ ನಗರಸಭೆ ಸೇರಿರುವದು ನಮ್ಮ ನಗರ ಮಾತ್ರ ಎಂದರು. ನಗರದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಸಾರ್ವಜನಿಕರು ಶೌಚಾಲಯ ಬಳಸಲು ಜನಬೀಡ ಜಾಗದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಎನ್.ಆರ್. ವೃತ್ತ, ತಣ್ಣಿರುಹಳ್ಳ, ಸಂತೇಪೇಟೆ ವೃತ್ತ, ರೈಲ್ವೆ ನಿಲ್ದಾಣದ ಬಳಿ, ಎಂಸಿಇ ಪಕ್ಕ, ಸಾರ್ವಜನಿಕರು ಶೌಚಾಲಯ ನಿರ್ಮಿಸಲು ಕೇಳಿದ್ದಾರೆ. ಈಗಾಗಲೇ ಬಹುತೇಕ ಆಗಿದ್ದು, ಉಳಿದ ಕಡೆಯು ಕೂಡ ಪೂರ್ಣಗೊಳಿಸುವುದಾಗಿ ಹೇಳಿದರು. ನಗರಸಭೆ ಸದಸ್ಯರ ಹಾಗೂ ಎಲ್ಲಾರ ಸಹಕಾರದಲ್ಲಿ ಇಂತಹ ಅವಾರ್ಡ್ ಲಭಿಸಿದೆ ಎಂದು ಸಂತೋಷವ್ಯಕ್ತಪಡಿಸಿದರು.