ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಕೊಲೆ
Update: 2017-08-16 23:32 IST
ಮಂಡ್ಯ, ಆ.16: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯನ್ನು ಹತ್ಯೆಗೈದಿರುವ ಘಟನೆ ನಗರದ ಚಂದಗಾಲು ಲೇಔಟ್‍ನಲ್ಲಿ ಬುಧವಾರ ನಡೆದಿದೆ. ಪ್ರಕಾಶ್ ಎಂಬುವರ ಪತ್ನಿ ಗೌರಮ್ಮ (55) ಕೊಲೆಯಾದ ಮಹಿಳೆ.
ಪ್ರಕಾಶ್ ಗೌರಮ್ಮ ದಂಪತಿ ತಮ್ಮ ಮೊಮ್ಮಗಳ ಜತೆ ವಾಸವಿದ್ದು, ಶಾಲೆಯಿಂದ ಮೊಮ್ಮಗಳು ಬಂದು ನೋಡಿದಾಗ ಗೌರಮ್ಮ ಕೊಲೆಯಾಗಿರುವುದು ತಿಳಿದು ಬಂದಿದೆ.
ಬೆರಳಚ್ಚು ತಜ್ಞರು, ಶ್ವಾನದಳ, ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ಸಂತೋಷ್, ಪಿಎಸ್‍ಐ ನಿರಂಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.