×
Ad

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2017-08-16 23:42 IST

ಸಕಲೇಶಪುರ,ಆ.16: ಸಕಲೇಶಪುರ ಕೃಷಿ ಇಲಾಖೆ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿರುವ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಕೆ.ಬಿ.ಸುಬ್ರಮಣ್ಯರವರು ತಿಳಿಸಿದ್ದಾರೆ.

ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದರಾಜ್ಯದಒಟ್ಟಾರೆ 10 ರೈತರಿಗೆತಲಾ 50000/- ರೂ, ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದಜಿಲ್ಲೆಯ 10 ರೈತರಿಗೆತಲಾ 25000/-ರೂ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಯನ್ನು ಆಯಾತಾಲ್ಲೂಕಿನ 5 ರೈತರಿಗೆತಲಾ 10000/- ರೂ ನಂತೆಜಿಲ್ಲಾ ಮಟ್ಟದಆಯ್ಕೆ ಸಮಿತಿಯತಿರ್ಮಾನದಂತೆ ವಿತರಿಸಲಾಗುವುದು.

ಪ್ರಶಸ್ತಿಗಾಗಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಾದ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ ,ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೇ ಬೇಸಾಯ, ಹೈಟೆಕ್‍ತಂತ್ರಜ್ಷಾನ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಇತ್ಯಾದಿ ಚಟುವಟಿಕೆಗಳಲ್ಲಿರುವ ರೈತರು ಭಾಗವಹಿಸಬಹುದು.

ಆರ್ಹ ಆಸಕ್ತ ರೈತರುರಾಜ್ಯ, ಜಿಲ್ಲಾ ಮತ್ತುತಾಲ್ಲೂಕು ಮಟ್ಟದ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

 ಆಸಕ್ತ ರೈತರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಕಛೇರಿ, ರೈತ ಸಂಪರ್ಕ ಕೇಂದ್ರಗಳಾದ ಕಸಬಾ, ಬೆಳಗೋಡು, ಹೆತ್ತೂರು, ಹಾನುಬಾಳು ಹಾಗೂ ಯಸಳೂರು ಕಛೇರಿಗಳಲ್ಲಿ ಅರ್ಜಿಗಳ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಕಛೇರಿಗೆ ಆಗಸ್ಟ 20 ರಂದು ಸಂಜೆ 5:30 ರೊಳಗಾಗಿ ತಲುಪಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News