ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ದಿಂಡಿ ಉತ್ಸವ
ಕಡೂರು, ಆ. 17: ಪಟ್ಟಣದ ಶ್ರೀ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಪಾಂಡುರಂಗ ರುಕ್ಮಾಯಿ ಅವರ 66ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ದಿಂಡಿ ಉತ್ಸವ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ಆಚರಿಸಲಾಯಿತು.
ಶ್ರೀ ಪಾಂಡುರಂಗ ರುಕ್ಮಾಯಿ ದೇವಾಲಯದಲ್ಲಿ ಶ್ರೀಕೃಷ್ಣನ ವಿಗ್ರಹಕ್ಕೆ ವಿಶೇಷ ಅಲಂಕಾರ ನಡೆಸಿ ಶ್ರೀಕೃಷ್ಣನ ಜೋಗುಳ ಸೇವೆಯನ್ನು ನೆರೆವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ಜಾತಿ ಪಂಗಡಗಳ ನಾಗರೀಕರು ಭಾಗವಹಿಸುವುದು ಈ ಕಾರ್ಯಕ್ರಮದ ವಿಶೇಷವಾಗಿದೆ.
ನಂತರ ಶ್ರೀ ಪಾಂಡುರಂಗ ರುಕ್ಮಾಯಿ ಅವರ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ್ದ ವಾಹನದಲ್ಲಿ ಭಜನಾಮಂಡಳಿ ಹಾಗೂ ಸಮಾಜ ಭಾಂದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಸ್ವಾಮಿಯವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂತರಾದ ಹನುಮಂತರಾವ್ ರಂಗದೋಳ್, ಗದ್ದಾಳೆ ಪುಂಡಲೀಕರಾವ್, ಯು.ಎನ್. ಭದರೀನಾಥ್, ಕೇಶವಮೂರ್ತಿಗೋಂದ್ಕರ್, ಮಂಜಪ್ಪಯ್ಯ, ಸಮಾಜದ ಅಧ್ಯಕ್ಷರಾದ ಕೆ. ಮೂರ್ತಿರಾವ್, ಕಾರ್ಯದರ್ಶಿ ರವಿಶಂಕರ್, ಪುಂಡಲೀಕರಾವ್, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.