ಶ್ರಮಜೀವಿ ಆಟೋ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
Update: 2017-08-17 17:35 IST
ಬಣಕಲ್, ಆ.17: ಬಣಕಲ್‍ನ ಶ್ರಮಜೀವಿ ಆಟೊ ಮಾಲಕರ ಮತ್ತು ಚಾಲಕರ ಸಂಘಕ್ಕೆ ಇತ್ತೀಚೆಗೆ ನೂತನ ಪಧಾದಿಕಾರಿಗಳ ನೇಮಕ ಮಾಡಲಾಗಿದೆ ಎಂದು ಮಾಜಿ ಶ್ರಮಜೀವಿ ಆಟೋ ಸಂಘದ ಅಧ್ಯಕ್ಷ ಸಬ್ಲಿ ದೇವರಾಜ್ ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್(ಆಟೋ ರಾಜಣ್ಣ), ಉಪಾಧ್ಯಕ್ಷರಾಗಿ ಅಣ್ಣು, ಕಾರ್ಯಧರ್ಶಿಯಾಗಿ ಅಬ್ದುಲ್ ಸಲಾಂ, ಸಹ ಕಾರ್ಯಧರ್ಶಿಯಾಗಿ ರವಿ ಬಗ್ಗಸಗೋಡು, ಖಜಾಂಚಿಯಾಗಿ ರಮೇಶ್ ಕೋಗಿಲೆ ನೇಮಕಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.