ಗಣೇಶ ಪ್ರತಿಷ್ಟಾಪನೆ ಅನುಮತಿಗೆ ಏಕ ಗವಾಕ್ಷಿ

Update: 2017-08-17 12:15 GMT

ಚಿಕ್ಕಮಗಳೂರು, ಆ.17: ನಗರದಲ್ಲಿ ಆ.25 ರಂದು ಆಚರಿಸಲಿರುವ ಗಣೇಶ ಚತುರ್ಥಿ ಅಂಗವಾಗಿ ವಿಗ್ರಹ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಬಗ್ಗೆ ಸಾರ್ವಜನಿಕರು ಮತ್ತು ಗಣಪತಿ ಸಮಿತಿಯವರು ಕಛೇರಿಯಿಂದ ಕಛೇರಿಗೆ ಅಲೆದಾಡುವುದನ್ನು ತಪ್ಪಿಸಲು ಪೊಲಿಸ್ ಇಲಾಖೆ ನಿರ್ಧರಿಸಿದೆ ಎಂದು ಎಸ್ಪಿ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

   ಸುಗಮವಾಗಿ ಅನುಮತಿ ಸಿಗುವಂತೆ ಮಾಡುವ ಸಲುವಾಗಿ ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ (ಪೊಲೀಸ್, ಮೆಸ್ಕಾಂ, ನಗರ ಸಭೆ, ಅಗ್ನಿಶಾಮಕ ಮತ್ತು ಲೋಕೋಪಯೋಗಿ) “ಏಕ ಗವಾಕ್ಷಿ” ವ್ಯವಸ್ಥೆಯನ್ನು ಚಿಕ್ಕಮಗಳೂರು ನಗರ ಸಭಾ ಕಛೇರಿಯಲ್ಲಿ ತೆರೆಯಲಾಗಿದೆ. ಸಾರ್ವಜನಿಕರು  ಆ.18ರಿಂದ ಆ.21ರ ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಗೆ ವರೆಗೆ ಅನುಮತಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

  ಆ.22ರಂದು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಆ.23 ರಂದು ಎಲ್ಲಾ ಇಲಾಖೆಗಳಿಂದ ಅನುಮತಿ ನೀಡಲಾಗುವುದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಈ ಸಂಬಂಧ ಪೊಲೀಸ್ ನಿರೀಕ್ಷಕರು, ಡಿ.ಸಿ.ಆರ್.ಬಿ. ಜಿಲ್ಲಾ ಪೊಲೀಸ್ ಕಛೇರಿ, ಚಿಕ್ಕಮಗಳೂರು (9480805109) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಈ ವಿಚಾರದಲ್ಲಿ ಯಾವುದೇ ಹೆಚ್ಚಿನ ಮಾಹಿತಿಗಾಗಿ ನೋಡೆಲ್ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News