×
Ad

ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ಹುಲಿ : ಗ್ರಾಮಸ್ಥರಲ್ಲಿ ಆತಂಕ

Update: 2017-08-18 18:36 IST

ಸಿದ್ದಾಪುರ, ಆ.18: ಇತ್ತೀಚೆಗೆ ಮಾಲ್ದಾರೆ ಸಮೀಪದ ಮೈಲಾದ್‍ಪುರದ ಕಾಫಿ ತೋಟವೊಂದರಲ್ಲಿ ಜಾನುವಾರುಗಳ ಮೇಲೆ ಹುಲಿಯೊಂದು ಧಾಳಿ ನಡೆಸಿ ಜಾನುವಾರುಗಳು ಸಾವನ್ನಪ್ಪಿದವು. ಈ ಹಿನ್ನಲೆಯಲ್ಲಿ ಹುಲಿಯ ಚಲನವಲನಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಕಾಫಿ ತೋಟದಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ಇದೀಗ ಅಳವಡಿಸಲಾಗಿರುವ 5 ಕ್ಯಾಮರಾಗಳ ಪೈಕಿ ಒಂದು ಸಿ.ಸಿ ಕ್ಯಾಮರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕೆಂದು ಮಾಲ್ದಾರೆ ಗ್ರಾ.ಪಂ ಅಧ್ಯಕ್ಷೆ ರಾಣಿ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News