×
Ad

ಕಳೆದ ಹತ್ತು ವರ್ಷದ ವಿಶೇಷ ಅನುದಾನದ ದಾಖಲೆ ನೀಡಲಿ: ಬೀರೂರು ದೇವರಾಜು

Update: 2017-08-18 18:57 IST

ಕಡೂರು, ಆ.18: ಕಳೆದ 10 ವರ್ಷಗಳಿಂದ ಕ್ಷೇತ್ರದ ಶಾಸಕರಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಿಂದ ಈಗಿನ ಸರ್ಕಾರದವರೆಗೆ ಶಾಸಕ ವೈ.ಎಸ್.ವಿ ದತ್ತ ವಿಶೇಷ ಅನುದಾನ ತಂದಿರುವ ದಾಖಲೆಗಳನ್ನು ಬಿಡುಗಡೆಗೊಳಿಸಲಿ ಎಂದು ಬಿಜೆಪಿ ಮುಖಂಡ ಬೀರೂರು ದೇವರಾಜು ಸವಾಲು ಹಾಕಿದರು.

ಅವರು ಶುಕ್ರವಾರ ಬೀರೂರಿನ ತಮ್ಮ ನಿವಾಸದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದರು. ದತ್ತ ಅವರು 6 ವರ್ಷ ವಿಧಾನ ಪರಿಷತ್ ಸದಸ್ಯರಾಗಿ, ನಾಲ್ಕುವರೆ ವರ್ಷ ಶಾಸಕರಾಗಿ ಇವರ ಕೊಡುಗೆ ಕ್ಷೇತ್ರಕ್ಕೆ ವಿಶೇಷತೆ ಏನು ಎಂಬಂತಾಗಿದೆ. ಇವರ ಅವಧಿಯಲ್ಲಿ ಹೆಚ್ಚುಕಾಲ ಬೆಂಗಳೂರಿನಲ್ಲೇ ಕಳೆದು. ಇದನ್ನು ಮುಚ್ಚಿಹಾಕಿಕೊಳ್ಳಲು ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ 1 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದ್ದು ಯಾರಿಗೂ ಏನು ಪ್ರಯೋಜನವೆಂದು ವ್ಯಂಗ್ಯವಾಡಿದರು.

ಪಾದಯಾತ್ರೆಯ ಸಮಯದಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ಲಕ್ಷಂತರ ರೂಗಳ ಭರವಸೆ ನೀಡಿ ಬಂದಿದ್ದು, ಯಾವ ಅನುದಾನದಲ್ಲಿ ನೀಡಲಿದ್ದಾರೆ. ಜನರು ಬುದ್ದಿ ಜೀವಿಗಳಗಿದ್ದು ಇವರ ಸುಳ್ಳು ಭರವಸೆಗಳನ್ನು ನಂಬುವುದಿಲ್ಲ. ಸೋಲಿನ ಹತಾಸೆಯಿಂದ ಪಾದಯಾತ್ರೆ ಕೈಗೊಂಡಿರುವುದು ವಿಪರ್ಯಸವಾಗಿದೆ. ಜೆಡಿಎಸ್ ಪಕ್ಷದಲ್ಲಿ ಕಡೂರು ಕ್ಷೇತ್ರದ ಟಿಕೆಟ್ ಬಗ್ಗೆ ಗೊಂದಲವಿದ್ದು.ಇದನ್ನು ಮುಚ್ಚಿಹಾಕಿಕೊಳ್ಳಲು ಜನರನ್ನು ಸೇರಿಸಿ ಸಭೆ ನಡೆಸಿದ್ದಾರೆ ಎಂದು ಲೇವಾಡಿ ಮಾಡಿದರು.

 ಕಳೆದ 10 ವರ್ಷಗಳಿಂದ ಶಾಶ್ವತ ನೀರಾವರಿ ಬಗ್ಗೆ ಮಾತನಾಡದ ದತ್ತ ರವರು ಚುನಾವಣೆ ಸಂದರ್ಭದಲ್ಲಿ ಹೆಬ್ಬೆ ಯೋಜನೆ ಸಾಧ್ಯವಿಲ್ಲ ಪರಿಹಾರ ಶಾಶ್ವತ ನೀರಾವರಿ ಯೋಜನೆ ಮಾಡುತ್ತೇನೆ ಎಂದು ಹೇಳಿಕೊಂಡು ಹೊರಟಿರುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಸರ್ಕಾರ ಶಾಶ್ವತ ನೀರಾವರಿ ಯೋಜನೆಯ ಬಗ್ಗೆ ಘೋಷಣೆ ಮಾಡುವುದಿಲ್ಲ. ದೊಡ್ಡ ಮಟ್ಟದ ಅನುದಾನ ನೀಡಲು ಇವರ ಸರ್ಕಾರ ಆಡಳಿತಲ್ಲಿದೆಯೇ ಎಂದು ಪ್ರಶ್ನಿಸಿದರು.

 ಸದನದಲ್ಲಿ ಶಾಶ್ವತ ನೀರಾವರಿ ಬಗ್ಗೆ ಎಷ್ಟು ಬಾರಿ ಚರ್ಚೆ ನಡೆಸಿದ್ದದಾರೆ ಎಂಬ ಮಾಹಿತಿಯನ್ನು ನೀಡಲಿ. ಯಾವುದೇ ಬಾಷಣದಿಂದ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ತರಲಾಗುವುದಿಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡುವುದಾಗಿ ನಾಟಕವಾಡುತ್ತಿದ್ದಾರೆ.ಇವರ ಸುಳ್ಳುಗಳನ್ನು ಜನ ನೋಡುತ್ತಿದ್ದಾರೆ ಎಂದರು.

 ಹೆಬ್ಬೆ ಯೋಜನೆಯ ಬಗ್ಗೆ ದಿ.ಕೃಷ್ಣಮೂರ್ತಿ ಮತ್ತು ದಿ.ಶ್ರೀಕಂಠಪ್ಪನವರ ಕೊಡುಗೆ ಮತ್ತು ಹೋರಾಟ ಇತ್ತು. ನಂತರ ಈ ಯೋಜನೆಗಾಗಿ ಯಾವುದೇ ಹೋರಾಟ ನಡೆಯಲಿಲ್ಲ. ಎಲ್ಲಾ ಪಕ್ಷಗಳ ಮುಖಂಡರುಗಳ ಸಹಕಾರ ವಿದ್ದರೆ ಶಾಶ್ವತ ನೀರಾವರಿ ಯೋಜನೆಯಾಗಲಿದೆ.ಒಳ್ಳೆಯ ಯೋಜನೆಗಳಿಗೆ ನಮ್ಮ ಸಹಕಾರವಿದೆ ಎಂದರು.

 ಈ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ರೇಖಾ ಹುಲಿಯಪ್ಪ ಗೌಡ, ಎಪಿಎಂಸಿ ಸದಸ್ಯ ಈರಣ್ಣ, ಮಚೇರಿ ಶ್ರೀನಿವಾಸ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News