×
Ad

ಚಾಮಲ್‍ ನ ಪಧಾದಿಕಾರಿಗಳಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ

Update: 2017-08-18 20:15 IST

ಹನೂರು,ಆ.18  :     ಪ್ರಪಂಚದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತ ದೇಶ ಪ್ರಥಮ ಸ್ಥಾನದಲ್ಲಿದ್ದು . ಕ್ಷೀರಕ್ರಾಂತಿ ಪ್ರಾರಂಭದ ನಂತರ ಸಾಕಷ್ಟು  ಸಣ್ಣ ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಜೀವನ ನೆಡಸಲು ತುಂಬಾ ಅನುಕೂಲ ಹಾಗೂ ಆಧಾರವಾಗಿರುವಂತಹ ಕ್ಷೇತ್ರ ಹೈನುಗಾರಿಕೆ ಆಗಿದ ಎಂದು ಸಂಸದರಾದ ಆರ್‍.ದ್ರುವನಾರಾಯಣ್ ತಿಳಿಸಿದರು

ಕ್ಷೇತ್ರ ವ್ಯಾಪ್ತಿಯ ಕೇಂದ್ರ ಸಿಂಗನಲ್ಲೂರು ಹಾಲು ಶೀಥಲಿಕರಣ ಕೇಂದ್ರದಲ್ಲಿ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.. ಕುದೇರು ಹಾಗೂ ಕೊಳ್ಳೇಗಾಲ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ನೂತನವಾಗಿ ಚಾಮಲ್‍ಗೆ ಆಯ್ಕೆಯಾದಂತಹ ಒಕ್ಕೂಟದ ಪಧಾದಿಕಾರಿಗಳಿಗೆ ಆಯೋಜಿಸಿದ್ದ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಬೀಕರ ಬರಗಾಲ ಇದ್ದರೂ ರೈತರ ಜೀವನ ಸಾಗಲು  ಕೃಷಿಗಿಂತಲೂ ರೈತರು ಹೈನುಗಾರಿಕೆಯನ್ನು  ಉಪಕಸಬು ಮಾಡಿದ್ದಾರೆ.

ಹೈನುಗಾರಿಕೆ ತುಂಬಾ ಲಾಭದಾಯಕವಾಗಿದೆ. ರೈತ ಬೆಳದ ಬೆಳೆಗೆ ನಿರ್ದಿಷ್ಟ ಬೆಲೆ ದೊರಕದಿದ್ದರೂ ಕೂಡ ಹಾಲಿಗೆ ಪ್ರತೇಕವಾದ ನಿಗದಿತದರ ಸಿಗುತ್ತದೆ.

ರಾಜ್ಯದಲ್ಲಿ ಯಾವುದೇ  ಜಿಲ್ಲೆಗಳಿಗಿಂತ ಚಾಮರಾಜನಗರ ಜಿಲ್ಲೆಯಲ್ಲಿಯೇ ಹೆಚ್ಚಿನ ಒಂದು ಲೀಟರ್ 27 ರೂ. ನಮ್ಮ ಒಕ್ಕೂಟ ನೀಡುತ್ತಿದ್ದು .ಇದ್ದಕ್ಕೆ ಸರ್ಕಾರ ಅನೇಕ ರೀತಿಯಲ್ಲಿ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು.

ಚಾಮರಾಜನಗರ ಹಾಲು ಒಕ್ಕೂಟ ಪ್ರತೇಕವಾಗಿ ನಿರ್ಮಾಣವಾಗಿದೆ ಎಂದರು.

ಚಾಮುಲ್‍ಗೆ ಶೀಘ್ರದಲ್ಲಿಯೇ ಉಳಿದ 54 ಕೋಟಿ ರೂ. ಅನುದಾನ ಬಿಡುಗಡೆÉ:  ಮಾನ್ಯ ಮುಖ್ಯ ಮಂತ್ರಿಗಳು ಉಮ್ಮತೂರಿನಲ್ಲಿ ಕರೆಗಳಿಗೆ ನೀರು ತುಂಬಿಸುವªಯೋಜನೆಗೆ ಗುದ್ದಲಿ ಪೂಜೆಗೆ ಆಗಮಿಸಿದ ಸಂದರ್ಭದಲ್ಲಿÀ ಕುದೇರು ಚಾಮುಲ್‍ ಒಕ್ಕೂಟ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಅವರಿಗೆ ತಿಳಿಸಿದ್ದೇವೆ . ಈಗಾಗಲೇ ಕಟ್ಟಡ ಪೂರ್ಣಗೂಂಡಿದ್ದು .ಅಲ್ಲಿಗೆ ಇನ್ನೂ ಹೆಚ್ಚಿನ ಯಂತ್ರೋಪಕರಣಗಳ ಅವ್ಯಶಕತೆ ಇದ್ದು .54 ಕೋಟಿ ಅನುದಾನ ಬಿಡುಗೆಡೆಗೂಳಿಸಿವಂತೆ ಜಿಲ್ಲೆಯ ಎಲ್ಲಾ ಶಾಸಕರು ಮನವಿ ಮಾಡಿಕೂಂಡಿದ್ದಾರೆ..

 ಶಾಸಕ ನರೇಂದ್ರ ಮಾತನಾಡಿ ಸಹಕಾರ ಸಂಘಗಳಲ್ಲಿ ರಾಜಕೀಯ ತರದೆ, ಒಕ್ಕೂಟ ಉಳಿಯಲು ರೈತರು ಗುಣಮಟ್ಟದ ಹಾಲು ಪೂರೈಸಿದರೆ ನೂತನ ಒಕ್ಕೂಟದ ಸದಸ್ಯರುಗಳು ಸಹ ಶ್ರಮಿಸಬೇಕಾಗಿದೆ ಎಂದರು.

ಚಾಮುಲ್‍ನ ನೂತನ ಅದ್ಕಕ್ಷರಾದ ಗುರುಮಲ್ಲಪ್ಪ ಹಾಗೂ ನೀರ್ದೆಶಕರುಗಳಗೆ ಅತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಶಾಸಕ ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಚಂದ್ದು, ಉಪಾಧ್ಯಕ್ಷ ಬಸವರಾಜು, ಸದಸ್ಯರುಗಳಾದ ಶಿವಮ್ಮ, ಮಂಜುಳ, ಮರಗದಮಣಿ, ಜಯಂತಿ ನಾಗರಾಜು, ತಾ.ಪಂ ಸದಸ್ಯಜವಾದ್‍ಅಹಮದ್, ಶಿವಕುಮಾರ್, ಮ.ಬೆಟ್ಟ ಪ್ರಾಧಿಕಾರದ ನಾಮ ನಿರ್ದೇಶಕ ಸದಸ್ಯದೇವರಾಜು, ಮಂಗಲ ಪುಟ್ಟರಾಜು, ಚಾಮುಲ್ ನಿರ್ದೇಶಕರುಗಳಾದ ಹೆಚ್‍ಎಸ್ ನಂಜುಂಡಪ್ರಸಾದ್‍ಮಾದಪ್ಪ, ನಂಜುಂಡಸ್ವಾಮಿ ಪ್ರಮೋದ, ಮುಕುಂಧವರ್ಮ, ತೋಟೇಶ್‍ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News