ಮಾನವೀಯ ನೆಲೆಯಲ್ಲಿ ವ್ಯಕ್ತಿಗೆ ಆಶ್ರಯ : ಮಾಹಿತಿ ನೀಡಲು ಮನವಿ
ಮಡಿಕೇರಿ,ಆ.18 :ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಿಕ್ಕಿಲ್ಲದೆ ಅಲೆದಾಡುತ್ತಿದ್ದ ಅನಾಥ ಶೇಖರ್‍ಗೆ(ಅಂದಾಜು 60ರ ಪ್ರಾಯ) ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಮಾನವೀಯ ನೆಲೆಯಲ್ಲಿ ಆಶ್ರಯವನ್ನು ನೀಡಲಾಗಿದೆ.
ಕಳೆದ ಒಂದು ವರ್ಷಗಳಿಂದ ಶೇಖರ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲೆದಾಡುತ್ತಿದ್ದರು. ಇದನ್ನು ಗಮನಿಸಿದ ದೊಡ್ಡಮಳ್ತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಶೇಖರ್‍ಗೆ ಯಾರೂ ಸಂಬಂಧಿಗಳು ಇಲ್ಲದಿರುವುದು ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಮಾಹಿತಿ ನೀಡಿ, ಅವರಿಗೆ ಆಶ್ರಯ ನಿಡುವಂತೆ ಮನವಿ ಮಾಡಿಕೊಂಡಿದ್ದಾಗಿ ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್ ತಿಳಿಸಿದ್ದಾರೆ.
ಪಂಚಾಯತ್ ನ ಮನವಿಯ ಮೇರೆ ಇದೀಗ ವೃದ್ಧ ಶೇಖರ್ ಅವರಿಗೆ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ನೆಲೆ ಒದಗಿಸಲಾಗಿದೆ. ಇವರ ಸಂಬಂಧಿಕರ ಬಗ್ಗೆ ಯಾರಿಗಾದರು ಮಾಹಿತಿ ಇದ್ದಲ್ಲಿ ಅಥವಾ ಅವರ ಸಂಬಂಧಿಕರು ಯಾರಾದರು ಇದ್ದಲ್ಲಿ ಸತೀಶ್, ವ್ಯವಸ್ಥಾಪಕರು, ಶ್ರೀ ಶಕ್ತಿ ವ್ರದ್ಧಾಶ್ರಮ, ಮಡಿಕೇರಿ, ಮೊ.9986408081 ನ್ನು ಸಂಪರ್ಕಿಸಬಹುದು.