ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಂಚೆ ಸೇವಕರ ಧರಣಿ
ಮಂಡ್ಯ, ಆ.18: ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಅಂಚೆ ಕಛೇರಿಯಿಂದ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಜಿಡಿಎಸ್ ಕಮಿಟಿ ವರದಿಯನ್ನು ನಮ್ಮ ಸಂಘವು ಕೊಟ್ಟಿರುವ ಮಾರ್ಪಾಡುಗಳೊಂದಿಗೆ ಜಾರಿಗೆ ತರಬೇಕು. 8 ಗಂಟೆ ಕೆಲಸ ನಿಗದಿಗೊಳಿಸಬೇಕು. ಹುದ್ದೆಯನ್ನು ಖಾಯಂಗೊಳಿಸಬೇಕು. ಟಾರ್ಗೆಟ್ ಹೆಸರಿನಲ್ಲಿ ಜಿಡಿಎಸ್ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ತಮ್ಮ ನ್ಯಾಯಯುತವಾಗಿ ಬೇಡಿಕೆಗಳಿಗೆ ಈಗಲಾದರೂ ಸ್ಪಂದಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ ಅವರು, ಇಲ್ಲವಾದರೆ ದೇಶಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಚಲುವರಾಜು, ಕರ್ನಾಟಕ ವಲಯ ಉಪಾಧ್ಯಕ್ಷ ಎನ್.ಕೆ.ಸತೀಶ್‍ಚಂದ್ರ, ಕಾರ್ಯದರ್ಶಿ ಶ್ರೀನಿವಾಸ, ಖಜಾಂಚಿ ಎಂ.ಕೆ.ಶಿವಲಿಂಗಯ್ಯ, ಡಿ.ರಂಗಸ್ವಾಮಿ, ರಾಜೇಶ್, ಶ್ರೀಕಾಂತ್, ಸುಧಾ, ಸರಸ್ವತಿ, ಜ್ಯೋತಿ, ಸಾಧನಾ, ಭಾಗ್ಯಮ್ಮ, ವಸಂತ, ಪ್ರಭಾಮಣಿ, ಹೊನ್ನೇಗೌಡ, ಕೆ.ವಿ.ಆನಂದ್ ಇತರರು ಪಾಲ್ಗೊಂಡಿದ್ದರು.