×
Ad

ಎಚ್.ಡಿ.ಕುಮಾರಸ್ವಾಮಿ ವರ್ತನೆಗೆ ಶ್ರಮಿಕನಗರ ಮುಖಂಡರ ಖಂಡನೆ

Update: 2017-08-18 23:23 IST

ಮಂಡ್ಯ, ಆ.18: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಲಹಳ್ಳಿ ಶ್ರಮಿಕ ನಗರಕ್ಕೆ ಭೇಟಿ ನೀಡಿದ ಕಾಲಕ್ಕೆ ನಡೆದುಕೊಂಡ ರೀತಿಯನ್ನು ಕರ್ನಾಟಕ ಜನಶಕ್ತಿಯ ಅಂಗ ಸಂಘಟನೆ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದಅಧ್ಯಕ್ಷ ಪ್ರಕಾಶ್ ಹಾಗುಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯದರ್ಶಿ ಸಿದ್ದರಾಜು ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಲಹಳ್ಳಿಯ ಜೈಭಾರತ್ ಶ್ರಮಿಕ ನಗರದ ಮನೆಗಳಿಗೆ ಮಳೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿರುವುದನ್ನು ಮಾಧ್ಯಮಗಳು ತೋರಿಸಿದ ನಂತರಅಲ್ಲಿಗೆ ಭೇಟಿ ನೀಡಿದಕುಮಾರಸ್ವಾಮಿಅನಪೇಕ್ಷಣೀಯವಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ವಿಚಾರದಲ್ಲಿ ಪರಿಣಾಮಕಾರಿ ಹೋರಾಟ ನಡೆಸದ ಮತ್ತು ಶ್ರಮಿಕ ನಗರಗಳ ವಿಚಾರದಲ್ಲಿ ಸ್ಪಂದಿಸದ ಕುಮಾರಸ್ವಾಮಿ,ನಿರಂತರವಾಗಿ ಶ್ರಮಿಕ ನಗರಗಳ ಜನರ ಜತೆ ನಿಂತು ಶ್ರಮಿಸುತ್ತಿರುವಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಮುಖಂಡ ಎನ್.ನಾಗೇಶ್ ಮತ್ತು ಇತರರ ಪ್ರಶ್ನೆಗೆ ಉತ್ತರಿಸದೆ ದಬಾಯಿಸಿದ ರೀತಿ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಯಲ್ಲಿರುವ ಎಲ್ಲರ ಬಿಡಿ ಬಿಡಿ ಸಮಸ್ಯೆಗಳನ್ನು ಅಧಿಕಾರದಲ್ಲಿಲ್ಲದ ಪಕ್ಷದ ರಾಜ್ಯಾಧ್ಯಕ್ಷರೆ ಕೇಳುತ್ತಾರೆಂದು ಭಾವಿಸುವುದು ಮೂರ್ಖತನವಾಗುತ್ತದಷ್ಟೆ. ಅವರ ಪಕ್ಷ ಪ್ರಬಲವಾಗಿದೆ ಎಂದು ಭಾವಿಸಲಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕೆಳಗಿನ ಹಂತದ ಪದಾಧಿಕಾರಿಗಳು ಅಥವಾ ಕಾರ್ಯಕರ್ತರೇ ಇಲ್ಲವೆಂಬುದು ನಮ್ಮ ಪ್ರಶ್ನೆ. ಇದುವರೆಗೂ ನಿರಂತರವಾದ ಸಮಸ್ಯೆಯಲ್ಲಿ ಬಳಲುತ್ತಿದ್ದ ಶ್ರಮ ಜೀವಿಗಳ ಸಂಕಷ್ಟ ಗಮನಿಸದೇ ಇದ್ದ ಅವರುಗಳು ದನ ಕಾಯುತ್ತಿದ್ದಾರಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

  ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಮತ್ತು ಅದಕ್ಕೆ ಬೆಂಬಲಕ್ಕೆ ನಿಂತಿರುವ ಗೌರವ ಸಲಹೆಗಾರ ನಾಗೇಶ್ ಅವರು ಒಳಗೊಂಡಂತೆ ಸಂಘಟನೆಯ ಪದಾಧಿಕಾರಿಗಳ ಕಾರಣಕ್ಕೆ ಶ್ರಮಿಕರೆಲ್ಲರೂ ಎತ್ತಂಗಡಿಯಾಗದೆ ಉಳಿದುಕೊಂಡಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಅವರು ತಮ್ಮ ಸ್ಥಳೀಯ ಬೆಂಬಲಿಗರಿಂದ ತಿಳಿದುಕೊಂಡರೆ ಒಳ್ಳೆಯದು.ಅದನ್ನು ಬಿಟ್ಟು, ಕನಿಷ್ಠ ತಾಳ್ಮೆ ಇಲ್ಲದೆ ಪ್ರಶ್ನೆ ಕೇಳಲು ಇನ್ನು ಆರಂಭಿಸುತ್ತಿದ್ದ ನಾಗೇಶ್ ಅವರ ಮೇಲೆ ರೇಗಿದ್ದನ್ನು ಸಂಘಟನೆಯು ಖಂಡಿಸುತ್ತದೆ ಎಂದಿದ್ದಾರೆ.

ಜನಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳಾಗಲು ಬಯಸುವ ರಾಜಕಾರಣಿಗಳು ಜನರ ನಿಜವಾದ ಸಮಸ್ಯೆ ತಿಳಿದು ಅದಕ್ಕೆ ಪರಿಹಾರ ಕೊಡಿಸಲು ಯತ್ನಿಸಬೇಕು. ಅದನ್ನು ಬಿಟ್ಟು ಯಾವುದಾದರೂ ದುರಂತ ಸಂಭವಿಸಿದಾಗ ದಿಢೀರನೆ ಬಂದು ತಕ್ಷಣ ಪರಿಹಾರ ಕಲ್ಪಿಸಿ ಉಪಕಾರ ಮಾಡಿದಂತೆ ವರ್ತಿಸುವುದು ಸರಿಯಲ್ಲ. ಮಾನವೀಯವಾಗಿ ಸ್ಪಂದಿಸುವ ಯಾರದೇ ನೆರವಿಗೆ ನಮ್ಮ ಸ್ವಾಗವಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News