ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರದಿಂದ ವಿಳಂಬ; ವಾಟಾಳ್ ಪ್ರತಿಭಟನೆ : ಬಂಧನ

Update: 2017-08-19 16:20 GMT

ಚಾಮರಾಜನಗರ, ಆ,19- ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡುವುದರಲ್ಲಿ ಚಾಮರಾಜನಗರ ಜಿಲ್ಲೆಯನ್ನು  ಕಡೆಗಣಿಸಿದೆ. ಚಾಮರಾಜನಗರದಿಂದ ಮುಂದಕ್ಕೆ  ಹೊಸಮಾರ್ಗ ಆಗಬೇಕು, ಚಾಮರಾಜನಗರ ಜಿಲ್ಲೆಯಾಗಿ 20 ವರ್ಷಗಳಾದರೂ ಅಭಿವೃದ್ದಿ ಕಂಡಿಲ್ಲ ಎಂದು ವಿರೋಧಿಸಿ. ನಗರದ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಸತ್ಯಾಗ್ರಹ ಮಾಡಲು ನಿಲ್ದಾಣದ ಒಳಗೆ ಹೋಗಲು ಯತ್ನಿಸಿದಾಗ ಪೋಲಿಸರು ತಡೆದು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿದರು.

ಇದಕ್ಕು ಮೊದಲು ವಾಟಾಳ್ ನಾಗರಾಜ್ ಅವರು ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ, ಪೋಲಿಸರು ಅವರ ಕಾರನ್ನು ಮುತ್ತಿಗೆ ಹಾಕಿ ಸುತ್ತುವರಿದರು. ನಂತರ  ವಾಟಾಳ್ ನಾಗರಾಜ್ ಅವರು ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸಲು ನುಗ್ಗಿದ್ದಾಗ ಗೇಟಿನ ಮುಖ್ಯ ದ್ವಾರ ಸ್ಥಳದಲ್ಲೆ ಸರ್ಪಗಾವಲಿನಿಂದ ಪೋಲಿಸರು. ನಿಮ್ಮನ್ನು  ಒಳಗಡೆ ಬಿಡುವುದಿಲ್ಲ. ಸತ್ಯಾಗ್ರಹ ಬಾಗಿಲ ಮುಂದೆಯೇ ಮಾಡಿ ಎಂದಾಗ, ಕೆರಳಿದ ವಾಟಾಳ್,ಅವರು ನಾನು ಒಬ್ಬನೇ ಹೋಗುತ್ತೆನೆ ನಮ್ಮವರು ಬರುವುದಿಲ್ಲ.ಎಂದು ಪಟ್ಟುಹಿಡಿದಾಗ  ಪೋಲಿಸರ ಮತ್ತು  ವಾಟಾಳ್ ನಾಗರಾಜ್‍ರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೋಲಿಸರು ವಾಟಾಳ್ ನಾಗರಾಜ್ ರವರನ್ನು ಬಂಧಿಸಿದರು.

ವಾಟಾಳ್ ನಾಗರಾಜ್ ರವರು ಸುದ್ದಿಗಾರರೊಂದಿಗೆ  ಮಾತನಾಡಿ ನಾಡಿನ ಆರೂವರೆ ಕೋಟಿ ಕನ್ನಡಿಗರಿಗೆ ಹಾಗೂ ಮಾಧ್ಯಮದವರಿಗೆ ವಂದನೆ ಸಲ್ಲಿಸುತ್ತೇನೆ. ನಾನು  54 ವರ್ಷಗಳಿಂದ ಸಾವಿರರು ಚಳವಳಿಯನ್ನು ಮಾಡುತ್ತಾ ಬಂದಿದ್ದೇನೆ. ನಾನು ಸ್ವಲ್ಪ ಒಂದಾಣಿಕೆ ಮಾಡಿ ಕೊಂಡಿದರೆ. ಎಂದೋ  ಈ ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿಯಾಗುತ್ತಿದ್ದೆ. ನಾನು ಯಾವುದಕ್ಕೂ ಪದವಿ ಅಧಿಕಾರಕ್ಕೆ ಆಸೆ ಪಡಲಿಲ್ಲ, ಕನ್ನಡ ನಾಡು ನುಡಿಗಾಗಿ ನಿತ್ಯ ನಿತಂತರವಾಗಿ ಹೋರಾಟಮಾಡುತ್ತಾ ಬಂದಿದ್ದೇನೆ. ಎಂದು ಹೇಳಿದರು.

ಹತ್ತಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರೈಲ್ವೆ ಸತ್ಯಾಗ್ರಹ ಮಾಡಲು ಡಿ.ಐ.ಜಿ. ಶ್ರೀನಿವಾಸ್‍ನ್ ಅವರು 4ಗಂಟೆಗಳ ಕಾಲ ಅವಕಾಶ ಮಾಡಿಕೊಟ್ಟಿದರು. ನೀವುಯಾಕೆ ನಿಲ್ದಾಣಕ್ಕೆ ಬಿಡುತ್ತಿಲ್ಲ. ಎಂದು ಪೋಲಿಸರಿಗೆ ಕೆಂಡಮಂಡಲವಾದ ವಾಟಾಳ್ ರವರು ಇದ್ದೇನು ಪೋಲಿಸ್ ರಾಜ್ಯವೇ, ಸರ್ವಧಿಕಾರವೇ ಪೋಲಿಸರಿಗೆ ಧಿಕ್ಕಾರ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ. ಎಂದು ತಮ್ಮ  ಆಕ್ರೋಶ ವ್ಯಕ್ತಪಡಿಸಿದರು. 

ಕರ್ನಾಟಕವನ್ನು ಕೇಂದ್ರ ಸರ್ಕಾರವು ಗುಲಾಮಗಿರಿಯಾಗಿ, ನಾಯಿಗಿಂತ ಕಡೆಯಾಗಿ ಕಾಣುತ್ತಿದೆ. ಚಾಮರಾಜನಗರ – ಮೆಟ್ಟುಪಾಳ್ಯಂ ರೈಲು ಮಾರ್ಗ, ಕನಕಪುರ,ಮದ್ದೂರು, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ ರೈಲು ಮಾರ್ಗ ಸೇರಿದಂತೆ ಅನೇಕ ರೈಲ್ವೆ ಬೇಡಿಕೆಗಳು ಅಲ್ಲದೇ ರಾಜ್ಯದಲ್ಲಿ  ನೆನಗುದಿಗೆ ಬಿದ್ದಿರುವ ಸಮಸ್ಯೆಗಳ ಬಗ್ಗೆ ನಮ್ಮ ರಾಜ್ಯದ ಪಾರ್ಲಿಮೆಂಟ್ ಸದ್ಯಸರು ಸಂಪೂರ್ಣ ವಿಫಲರಾಗಿದ್ದಾರೆ. ಎಂದು ಆರೋಪಿಸಿದ ವಾಟಾಳ್‍ರು, ನಮ್ಮ ಪಾರ್ಲಿಮೆಂಟ್ ಸದ್ಯಸರಿಗೆ ಮಾನ-ಮರ್ಯಾದೆ ಇಲ್ಲ, ಗಂಡಸ್ತನವಿಲ್ಲ, ತಾಕತ್ತಿಲ್ಲ,ಲೋಕಸಭೆಯಲ್ಲಿ ಒಂದು ದಿನವೂ ವಿಚಾರಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಾಮರಾಜನಗರವನ್ನು ಜಿಲ್ಲೆ ಮಾಡಿಸಿದವನು ನಾನೇ, ಜೆ.ಹೆಚ್.ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1997 ಆಗಸ್ಟ್ 15ನೇ ತಾರೀಖ್ ರಂದು ಮಲೈ ಮಹದೇಶ್ವರ ಬೆಟ್ಟಕ್ಕೆ ಕರೆತಂದು ಉದ್ಘಾಟನೆ ಮಾಡಿಸಿದ್ದೆನೆ. ಎಂದು ತಿಳಿಸಿದ ವಾಟಾಳ್ ಅವರು.ಜಿಲ್ಲೆಯಾಗಿ 20ವರ್ಷಗಳಾದರೂ ಚಾಮರಾಜನಗರ, ಹೋಬಳಿ, ತಾಲ್ಲೂಕಾಗಿ ಕಾಣುತ್ತಿದ್ದೆ. ಅಭಿವೃದ್ದಿ ಕಂಡಿಲ್ಲ ರಾಜ್ಯ ಸರ್ಕಾರ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ಸೇರಿದಂತೆ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ದಳಪತಿವೀರತ್ತಪ್ಪ, ಕಾರ್‍ನಾಗೇಶ್, ಜಸುರೇಶ್‍ನಾಗ್, ಎ.ಪಿ.ಎಂ.ಸಿ ಮಾಜಿ ಸದಸ್ಯಶಿವು, ನಾಗರಾಜಮೂರ್ತಿ, ಬಿ.ವಿ.ರೇವಣ್ಣ, ಪರಶಿವಮೂರ್ತಿ, ಕಾರ್‍ವರದನಾಯಕ, ವರದರಾಜು.ವಡ್ಡರಹಳ್ಳಿಮಹೇಶ, ಲಿಂಗಣ್ಣನಾಯಕ,ಲೋಕೆಶ್.ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News