×
Ad

ಕೆರೆಗಳ ಡಿ ನೋಟಿಫೈ ಸರಕಾರದ ಮುಂದಿಲ್ಲ: ಸಿದ್ದರಾಮಯ್ಯ

Update: 2017-08-19 22:21 IST

ತುಮಕೂರು,ಆ.19:ರಾಜ್ಯದಲ್ಲಿರುವ ಕೆರೆಗಳ ಡಿನೋಟಿಫೈ ಮಾಡುವ ಪ್ರಸ್ತಾಪ ಸದ್ಯಕ್ಕಿಲ್ಲ.ಯಾವುದೇ ಕೆರೆಯ ಡಿನೋಟಿಪೈ ಮಾಡುವುದಿಲ್ಲ.ರಾಜ್ಯಪಾಲರು ಮಾಹಿತಿ ಕೊರತೆಯಿಂದ ಆರೀತಿ ಹೇಳಿರಬಹುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಷ್ಟಪಡಿಸಿದರು.

ಶನಿವಾರ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ವೇಳೆಯಲ್ಲಿ ಹೆಚ್.ಎಂ.ಎಸ್.ಐ.ಟಿ.ಆವರಣದಲ್ಲಿ ಬಹು ಕೌಶಲ್ಯ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆರೆಗಳ ಡಿನೋಟಿಫೈ ಮಾಡುವ ಪ್ರಸ್ತಾಪ ಸಚಿವ ಸಂಪುಟದ ಮುಂದಿಲ್ಲ. ನಮಗೂ ಪರಿಸರದ ಅರಿವಿದೆ ರಾಜ್ಯಪಾಲರಿಗೆ ಮಾಹಿತಿ ಕೊರತೆ ಇರುವ ಕಾರಣ,ಈ ರೀತಿಯಾಗಿ ಹೇಳಿದ್ದಾರೆ.ನನಗೆ ಪತ್ರ ಬರೆದು ಒಂದು ವಾರದಲ್ಲಿ ಇದಕ್ಕೆ ಉತ್ತರ ನೀಡಬೇಕೆಂದು ಕಾಲಾವಕಾಶ ನೀಡಿದ್ದಾರೆ ಅಷ್ಟರೊಳಗೆ ಮಾಹಿತಿ ನೀಡುವುದಾಗಿ ತಿಳಿಸಿದರು. 

 ನಾನು ಯಾರ ವಿರುದ್ದವೂ ಸೇಡಿನ ರಾಜಕರಣ ಮಾಡುವುದಿಲ್ಲ.ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.ಇದಕ್ಕೂ ನನಗೂ ಸಂಬಂಧವಿಲ್ಲ. ಯಡಿಯೂರಪ್ಪ ತಪ್ಪು ಮಾಡಿದ್ದರೆ ಶಿಕ್ಷೆ ಅನುಭಸಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ತಪ್ಪು ಮಾಡಿದವರನ್ನು ಹಾಗೆಯೇ ಬಿಡಬೇಕು ಎಂದರು ಪಾಪ ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದವರು, ಯಡಿಯೂರಪ್ಪ ಅವರಿಗೆ ಜೈಲಿನದ್ದೇ ಕನವರಿಕೆಯಾಗಿದೆ.ಅದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸುವ ಮಾತನಾಡುತ್ತಿದ್ದಾರೆ ಎಂದರು.

ಸಚಿವ ಡಿಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆದಿದೆ. ಹಾಗಂತ ಅವರು ಬ್ರಷ್ಟರಲ್ಲ.ಐಟಿ ಅಧಿಕಾರಿಗಳು ಈ ಸಂಬಂದ ಏನೂ  ಹೇಳಿಲ್ಲ.ಬಿಜೆಪಿ ಅವರಿಗೆ ಕಾನೂನು ಗೊತ್ತಿಲ್ಲದ ಮೂರ್ಖರು.ರಾಜ್ಯಕ್ಕೆ ಅಮಿತ್ ಷಾ ಬಂದು ಹೋದಮೇಲೆ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಯವರು ಹೊರಟಿದ್ದಾರೆ ಎಂದರು.
ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎನ್ನುವುದು ಸುಳ್ಳು,ಇಂದಿರಾ ಕ್ಯಾಂಟಿನ್‍ನಲ್ಲಿ ಬಡವರಿಗೆ ಊಟ ನೀಡುತ್ತಿದ್ದೇವೆ ನಾನು ಊಟ ಮಾಡಿದ್ದೇನೆ ಊಟ ಚೆನ್ನಾಗಿದೆ.ಕೆಲವರು ಸುಖಾ ಸುಮ್ಮನೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನುಡಿದರು.

ರಾಜ್ಯದಲ್ಲಿ ಮಳೆ ಅಭಾವ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಆಗಸ್ಟ್ 21 ರಂದು ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಹೇಳಿದರು. 
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪ್ರತಿಕ್ರಿಸಿದ ಅವರು, ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ದಿನಾಂಕ ನಿಗದಿಯಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News