×
Ad

ಮುಂಡಗೋಡ : ಕಾಂಗ್ರೆಸ್ ಕಾರ್ಯಕರ್ತನ ಅಕಾಲಿಕ ಮೃತ್ಯು

Update: 2017-08-19 22:32 IST

ಮುಂಡಗೋಡ, ಆ. 19: ಕೊಡಂಬಿ ಗ್ರಾಮದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಮೌನೇಶ ಭಜಂತ್ರಿ(45) ಅಕಾಲಿಕ ಮರಣದಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚಿಂತೆಯ ವಾತಾವರಣ ಸೃಷ್ಟಿಯಾಗಿದೆ.

ಶನಿವಾರ  ಅವರು ಕೆಲಸದಲ್ಲಿ ಮಗ್ನರಾಗಿದ್ದಾಗ ಅಕಸ್ಮತಾಗಿ ನಿಧನ ರಾಗಿದ್ದಾರೆ. ಇವರ ನಿಧನಕ್ಕೆ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಕಂಬನಿ ಮಿಡಿದು ಕುಟುಂಬಸ್ಥರಿಗೆ  ಆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ಇವರ ನಿಧನ ದಿಂದ ಕಾಂಗ್ರೆಸ್ ಒಬ್ಬ ನಿಷ್ಠಾವಂತ ಕಾರ್ಯಕರ್ತ ಕಳೆದುಕೊಂಡತಾಗಿದೆ.  ಹಾಗೂ ಇವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಶಾಸಕರು ದುಃಖ ಭರಿತವಾಗಿ ನುಡಿದಿದ್ದಾರೆ.

ಮೃತರು ಪತ್ನಿ , ಮೂರು ಪುತ್ರಿಯರು, ಒರ್ವಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News