×
Ad

ರಾಜ್ಯ ಸರಕಾರ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ: ನರೇಂದ್ರರಾಜು ಗೌಡ

Update: 2017-08-20 18:13 IST

  ಹನೂರು, ಆ. 20: ನಮ್ಮಗ್ರಾಮ ನಮ್ಮರಸ್ತೆ ಯೋಜನೆಯಡಿ ರಸ್ತೆ ನಿರ್ಮಿಸಲು ಮುಂದಾಗಿದ್ದು, ಟೆಂಡರ್ ಪಡೆದ ಗುತ್ತಿಗೆದಾರರು ಸ್ಥಳೀಯರ ಸಹಕಾರ ಪಡೆದು ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರಿ ನರೇಂದ್ರರಾಜು ಗೌಡ ತಿಳಿಸಿದ್ದಾರೆ.

ಹನೂರು ಪಟ್ಟಣದ ಮುಖ್ಯರಸ್ತೆಯಿಂದ ರಾಯರದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯನವರು ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು .ಕ್ಷೇತ್ರದಲ್ಲಿ ಸಾಕಾಷ್ಟು ರಸ್ತೆಗಳು ಅಭಿವೃದ್ದಿ ಹೊಂದಿದ್ದು, ಇಂದು ಹನೂರು ಪಟ್ಟಣದ ಹೊರವಲಯದ ಗ್ರಾಮಗಳಾದ ರಾಯರದೊಡ್ಡಿ ಗ್ರಾಮ ಮೊರಾರ್ಜಿಶಾಲೆಗೆ ಹಾಗೂ ಇನ್ನಿತರ  ಗ್ರಾಮಗಳಿಗೆ  ಸಂಪರ್ಕಗಳಿಸುವ ರಸ್ತೆಯ ಅಭಿವೃದ್ಧಿಯ ಜೊತೆಗೆರಸ್ತೆಯನ್ನು ಮೇಲ್ದರ್ಜೆಗೆರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಕೂಡಲಾಗುವುದು.  ಈ ಕಾಮಗಾರಿಯು 2.28 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು,  ಅಧಿಕಾರಿಗಳು ಗುಣ ಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ಈ  ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಬಸವರಾಜು, ತಾಪಂ ಮಾಜಿಅಧ್ಯಕ್ಷ ಮುರುಳಿ, ಪಟ್ಟಣ ಪಂಚಾಯಿತ್  ಅಧ್ಯಕ್ಷೆ ಮಮತಾ ಮಹದೇವ್, ಉಪಾದ್ಯಕ್ಷರಾದ ಬಸವರಾಜು, ಪಪಂ ಮಾಜಿ ಅದ್ಯಕ್ಷರಾದ ರಾಜುಗೌಡ , ಬಾಲರಾಜನಾಯ್ಡು ಸದಸ್ಯರು, ಟಿ.ಎ.ಪಿ.ಎಂ.ಸಿ ಅಧ್ಯಕ್ಷ ಮೆಹಬೂಬ್ ಶರೀಫ್, ನಿರ್ದೇಶಕ ಮಾದೇಶ್, ಮುಂಖಡರಾದ ಮಹೇಶ್, ನಟರಾಜು, ರಾಜೇಶ್‍, ಉದ್ದನೂರು ಕೃಷ್ಣ ಮತ್ತತಿತರರಿದ್ದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News