×
Ad

ಚಿಕ್ಕಮಗಳೂರು: ಡಿ.ದೇವರಾಜು ಅರಸು ಜನ್ಮ ದಿನ

Update: 2017-08-20 19:02 IST

ಚಿಕ್ಕಮಗಳೂರು, ಆ.20:  ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ನಗರದ ಕರ್ನಾಟಕ ರಕ್ಷಣಾ ವೇದಿಕೆ ಕಛೇರಿಯಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.

ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗಧೀಶ್ ಮಾತನಾಡಿ, ಕರ್ನಾಟಕದ ಶಿಲ್ಪಿ ದೇವರಾಜ ಅರಸು ಅವರ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಅರಸು ಅವರು ಹಿಂದುಳಿದ ವರ್ಗಗಳ ದಾರಿದೀಪವಾಗಿದ್ದಾರೆ, ಉಳುವವನಿಗೆ ಭೂಮಿ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಬಡವರು ದೀನರು ಮತ್ತು ದಲಿತರಿಗೆ ಭೂಮಿಯ ಹಕ್ಕು ನೀಡಿದ್ದಾರೆ ಎಂದು ಹೇಳಿದರು.

ಪಕ್ಷದ ಹೈಕಮಾಂಡನ್ನು ಧಿಕ್ಕರಿಸಿ ಅಧಿಕಾರಕ್ಕೆ ಅಂಟಿಕೊಳ್ಳದೆ ರಾಜ್ಯದ ಜನತೆಯ ಪರವಾಗಿ ನಿಂತ ಅರಸು ಅವರ ನಡೆ ನುಡಿ ಧೀಮಂತ ರಾಜಕಾರಣ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು ಎಂದು ತಿಳಿಸಿದರು.

 ಜನ್ಮ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಜಿಲ್ಲಾ ಅರಸು ಸಂಘದ ಉಪಾಧ್ಯಕ್ಷ ದಶರಥರಾಜ್ ಅರಸ್, ಕರವೇ ಜಿಲ್ಲಾ ಕಾರ್ಯದರ್ಶಿ ಸತೀಶ್‍ರಾಜ್ ಅರಸ್, ನಗರ ಕಾರ್ಯದರ್ಶಿ ರಂಜಿತ್, ಪ್ರೀತಮ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News