ಹಾಸನ: ಕಾಂಗ್ರೆಸ್ ಭವನದಲ್ಲಿ ದಿ.ರಾಜೀವ್‍ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ
ಹಾಸನ,ಆ.20: ನಗರದ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹುಟ್ಟಿದ ಆಚರಣೆ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ದಿ| ಡಿ. ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ಇದೆ ವೇಳೆ ದೇವರಾಜ ಅರಸುರವರ ಜೀವನ ಆದರ್ಶಗಳು ಅನುಕರಣಿಯ. ಅವರು ಬಡವರು, ಹಿಂದುಳಿದ ವರ್ಗದವರು, ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು. ಭೂ ಸುಧಾರಣಾ ಕಾಯ್ದೆ ಮೂಲಕ ಲಕ್ಷಾಂತರ ಕುಟುಂಬಗಳ ಭವಿಷ್ಯ ಬೆಳಗಿದ ಮಹಾನ್ ಚೇತನ ಎಂದರು. ಧೀಮಂತ ವ್ಯಕ್ತಿಯಾಗಿರುವ ಡಿ.ದೇವರಾಜ ಅರಸು ಅವರು ರಾಜ್ಯದ ನೂರಾರು ವಿದ್ಯಾರ್ಥಿ ವಸತಿ ನಿಲಯಗಳ ಸ್ಥಾಪನೆಗೆ ಕಾರಣರಾದರು.
ಅನೇಕ ಸಾಮಾಜಿಕ ಸುಧಾರಣೆಗಳ ಮೂಲಕ ಎಲ್ಲರ ಮನೆ ಮಾತಾದರು. ಅವರ ದೂರದೃಷ್ಠಿ ಚಿಂತನೆಗಳನ್ನು ಇಟ್ಟುಕೊಂಡೇ ಎಲ್ಲಾ ಸರ್ಕಾರಗಳು, ಸಮುದಾಯಗಳು, ನಾಯಕರುಗಳು ಮುಂದುವರೆಯಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವರಾಂ, ಟ್ರೇಡ್ ಯೂನಿಯನ್ ಕಾಂಗ್ರೆಸ್ ಮಹಿಳಾ ರಾಜ್ಯ ಅಧ್ಯಕ್ಷೆ ತಾರ ಚಂದನ್, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಜಿ.ವಿ. ಕೃಷ್ಣಪ್ರಸಾದ್ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಪರ್ವಿಜ್ ಪಾಷಾ, ಅಸ್ಲಾಂ ಪಾಷಾ, ಬಸವರಾಜು ಇತರರು ಉಪಸ್ಥಿತರಿದ್ದರು.