ಕೇಂದ್ರ ಸರಕಾರದ ಸಾಧನೆ ಎಂದು ರಷ್ಯಾದ ಫೋಟೊ ಟ್ವೀಟ್ ಮಾಡಿದ ಸಚಿವ ಪಿಯೂಷ್ ಗೋಯಲ್!

Update: 2017-08-21 08:15 GMT

ಹೊಸದಿಲ್ಲಿ, ಆ.21:  ಭಾರತದ 50,000 ಕಿ.ಮೀ. ಉದ್ದದ ರಸ್ತೆಗಳಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಿರುವ ಸರಕಾರದ ಸಾಧನೆಯ ಬಗ್ಗೆ ಫೋಟೊ ಒಂದನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದ ಇಂಧನ ಸಚಿವ ಪಿಯೂಷ್ ಗೋಯಲ್ ಪೇಚಿಗೆ ಸಿಲುಕಿದ್ದಾರೆ.

ಅದಕ್ಕೆ ಕಾರಣ ಸಚಿವರು ಪೋಸ್ಟ್ ಮಾಡಿದ್ದ ಫೋಟೊ ಭಾರತದ್ದಾಗಿರಲಿಲ್ಲ, ಬದಲಾಗಿ ರಷ್ಯಾದ್ದಾಗಿತ್ತು.
ನಕಲಿ ಸುದ್ದಿಗಳನ್ನು ಬಹಿರಂಗಗೊಳಿಸುವ ಎಸ್ ಎಂ ಹಾಕ್ಸ್ ಸ್ಲೇಯರ್ ಎಂಬ ವೆಬ್ ತಾಣ ಈ ಪ್ರಮಾದವನ್ನು ಬೊಟ್ಟು ಮಾಡಿ ತೋರಿಸಿದ ನಂತರ ಪಿಯೂಷ್ ಫೋಟೊ ಡಿಲೀಟ್ ಮಾಡಿದ್ದಾರಲ್ಲದೆ ತಮ್ಮ ತಪ್ಪನ್ನು ಎತ್ತಿ ತೋರಿಸಿದವರಿಗೆ ಧನ್ಯವಾದ ತಿಳಿಸಿದರು. ಸಾಮಾಜಿಕ ಜಾಲತಾಣಗಳು ``ವಾಸ್ತವಗಳತ್ತ ಬೆಳಕು ಚೆಲ್ಲುತ್ತವೆ'' ಎಂದೂ ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗರು ತಪ್ಪು ಫೋಟೋಗಳನ್ನು ಹಾಕುತ್ತಿರುವುದು ಇದೇ ಮೊದಲಲ್ಲ ಎಂದು ಟ್ವಿಟ್ಟರಿಗರು ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News