ಎಸ್ ಬಿಐ ಗ್ರಾಹಕರೇ ಗಮನಿಸಿ... ಶೀಘ್ರವೇ ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಲಿದೆ! ಏಕೆಂದರೆ..

Update: 2017-08-21 12:24 GMT

ಹೊಸದಿಲ್ಲಿ, ಆ. 21: ಉಳಿತಾಯ ಖಾತೆಯ ಬಡ್ಡಿದರ ಕಡಿಮೆ ಮಾಡಿದ  ಬಳಿಕ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಾರ್ಡ್‍ನ ಕುರಿತು ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ವರದಿಯಾಗಿರುವ ಪ್ರಕಾರ ಮೆಗಾಸ್ಟ್ರಿಪ್(ಮ್ಯಾಗ್ನೆಟಿಕ್) ಡೆಬಿಟ್ ಕಾರ್ಡ್‍ನ್ನು ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ಗಳೊಂದಿಗೆ ಬದಲಾಯಿಸಲು ನಿರ್ಧರಿಸಲಾಗಿದೆ. ಈ ಬದಲಾವಣೆ ಮಾಡದಿದ್ದರೆ ಎಟಿಎಂ ಕಾರ್ಡನ್ನು ಬ್ಲಾಕ್ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ ತನ್ನ ಅಧಿಕೃತ ವೆಬ್‍ಸೈಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಅದರಲ್ಲಿ ಈ ಹೆಜ್ಜೆಯನ್ನು ಗ್ರಾಹಕರ  ಸುರಕ್ಷೆಯ ದೃಷ್ಟಿಯಿಂದ ಇರಿಸಲಾಗಿದೆ ಎಂದು ತಿಳಿಸಲಾಗಿದೆ.

ಇದಕ್ಕೆ ಕಾರಣವೇನು:

ಬ್ಯಾಂಕ್ ನೀಡಿರುವ ಹೇಳಿಕೆಯಲ್ಲಿ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್‍ನ್ನು ಬದಲಾಯಿಸಲು ತಮ್ಮ ಬ್ಯಾಂಕ್‍ಗೆ ಭೇಟಿ ನೀಡಬೇಕಾಗಿದೆ  ಅಥವಾ ಆನ್‍ಲೈನ್ ಬ್ಯಾಂಕಿಂಗ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಕಳೆದ ವರ್ಷ ರಿಸರ್ವ್ ಬ್ಯಾಂಕ್ ಬ್ಯಾಂಕ್‍ಗಳ ಮ್ಯಾಗ್ನೆಟಿಕ್ ಸ್ಟ್ರಿಪ್ ಬೇಸ್ಡ್ ಎಟಿಎಂನ ಬದಲಾಗಿ ಇಎಂವಿ ಚಿಪ್ ಮತ್ತು ಕಾರ್ಡ್ ನ ಪಿನ್ ಆಧಾರಿತ ಮಾಡಲ್‍ನೆಡೆಗೆ ವರ್ಗಾಯಿಸಲು ಸೂಚಿಸಿತ್ತು.  ಎಟಿಎಂ ಕಾರ್ಡ್‍ನ ಸುರಕ್ಷತೆಯನ್ನು ಹೆಚ್ಚಿಸಿ ಗ್ರಾಹಕರು ಇತರರಿಂದ  ಮೋಸ ಹೋಗದಂತೆ ರಕ್ಷಿಸುವುದು ಇದರ ಉದ್ದೇಶವಾಗಿದೆ.

ಇಎಂವಿ ಚಿಪ್ ಕಾರ್ಡ್ ಎಂದರೇನು:

ಇದೊಂದು ಹೊಸರೀತಿ ತಂತ್ರಜ್ಞಾನವಾಗಿದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಲ್ಲಿ ಸಣ್ಣ ಚಿಪ್ ಇರುತ್ತದೆ. ಇದರಲ್ಲಿ ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ ಇರುತ್ತದೆ. ಈ ಮಾಹಿತಿ ಎನ್ಕ್ರಿಪ್ಟೆಡ್ ಆಗಿರುತ್ತದೆ. ಆದ್ದರಿಂದ ನಿಮ್ಮ ಡಾಟಾವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News