'ನೀರಿಗಾಗಿ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ'
ಹಾಸನ, ಆ, 21: ಹೇಮಾವತಿ ಜಲಾಶಯವು ಪ್ರಸಕ್ತ ವರ್ಷ ನೀರಿನ ಒಳಹರಿವು ನಿರಾಶಾದಾಯಕವಾಗಿದ್ದು, ನೀರಿನ ಅಭಾವ ನೀಗಿಸಿಕೊಳ್ಳಲು ಜಲಾಶಯದಲ್ಲಿರುವ ನೀರಿನ ಅಲಭ್ಯತೆಯನ್ನು ಅನುಸರಿಸಿ ಜನ ಜಾನುವಾರುಗಳಿಗೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಸರ್ಕಾರದಿಂದ ಅನುಮೋದಿತವಾಗಿರುವ ಕುಡಿಯುವ ನೀರಿನಯೋಜನೆಯ ಕೆರೆಗಳಿಗೆ ಮಾತ್ರ ತಾತ್ಕಾಲಿಕವಾಗಿ ಹೇಮಾವತಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ನಾಲೆಗಳಲ್ಲಿ ನೀರನ್ನುಹರಿಸಲಾಗಿದೆ.
ರೈತರು ಇಚ್ಛಿಸಿದಲ್ಲಿ ಮಳೆಯ ಆಶ್ರಿತ ಬೆಳೆಗಳನ್ನು ಬೆಳೆಯಲು ಅಭ್ಯಂತರವಿಲ್ಲ. ಯಾವುದೇ ನಾಲೆಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸದಿರಲು ಹಾಗೂ ನೀರಾವರಿ ಇಲಾಖೆಯೊಂದಿಗೆ ಸಹಕರಿಸುವಂತೆ ತುರುವೇಕೆರೆ ಹೇಮಾವತಿ ನಾಲಾವೃತ್ತದ ನಂ.4 ಹೇಮಾವತಿ ಎಡದಂತೆ ನಾಲಾ ವಿಭಾಗ, ಕಾವೇರಿ ನೀರಾವರಿ ನಿಗಮ(ನಿ), ತುರುವೇಕೆರೆ ಕಚೇರಿಯ ಕಾರ್ಯಪಾಲಕ ಇಂಜಿನಿಯರ್ ಹಾಗೂ ನೀರಾವರಿ ಅಧಿಕಾರಿ ಮನವಿ ಮಾಡಿದ್ದಾರೆ.
ರೈತರು ಅಚ್ಚು ಕಟ್ಟಿನಲ್ಲಿ ನಾಲಾ ಆಶ್ರಿತ ನೀರಿನಿಂದ ಬೆಳೆಯಲು ಪ್ರಯತ್ನಿಸಿದಲ್ಲಿ ಆಗುವ ನಷ್ಟಕ್ಕೆ ಇಲಾಖೆ ಹೊಣೆ ಮತ್ತು ಜವಾಬ್ದಾರರಲ್ಲ ಎಂದು ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಬಿ.ಜಿ.ವಿಜಯಕುಮಾರ್ ತಿಳಿಸಿದ್ದಾರೆ.