ಬೇಬಿ ಬೆಟ್ಟದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣ: ಸಂಸದ ಪುಟ್ಟರಾಜು, ಇತರರ ವಿರುದ್ಧ ಸಿಬಿಐಗೆ ದೂರು
ಮಂಡ್ಯ, ಆ.21: ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಅಮೃತ ಕಾವಲ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣ ಈಗ ಸಿಬಿಐ ಮೆಟ್ಟಿಲೇರಿದ್ದು, ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ತನಿಗೆ ಕೋರಿ ಸಿಬಿಐಗೆ ದೂರು ದಾಖಲಿಸಿದ್ದಾರೆ.
ಸಂಸದ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ, ಸಹೋದರನ ಪುತ್ರರಾದ ಅಶೋಕ್ (ಜಿಪಂ ಸದಸ್ಯ), ಶಿವಕುಮಾರ್, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಸ್.ಝೀಯಾವುಲ್ಲಾ, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, U್ಪಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ನಾಗಭೂಷಣ್, ಪಾಚಿಡವಪುರ ತಹಸೀಲ್ದಾರ್, ಸರ್ವೆಯರ್, ಚಿನಕುರಳಿ, ಹೊನಗಾನಹಳ್ಳಿ ಗ್ರಾಪಂ ಅಧ್ಯಕ್ಷರು, ಪಿಡಿಓ ಅವರನ್ನು ಆರೋಪಿಗಳನ್ನಾಗಿಸಿ ದೂರು ನೀಡಲಾಗಿದೆ.
ಪಾಚಿಡವಪುರ ತಾಲೂಕು ಬೇಬಿ ಬೆಟ್ಟ ಅಮೃತ ಕಾವಲ್ ಅರಣ್ಯ ಪ್ರದೇಶ, ಸುತ್ತಮುತ್ತ ಸಿ.ಎಸ್.ಪುಟ್ಟರಾಜು ಕುಟುಂಬ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಇದರಲ್ಲಿ ಜಿಲ್ಲಾಧಿಕಾರಿ ಸ್ಭೆರಿದಂತೆ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ದೂರುದಾರ ರವೀಚಿದ್ರ ಅವರ ಆರೋಪವಾಗಿದೆ.
ಈ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ರವೀಚಿದ್ರ, ಈಗಾಗಲೇ ಲೋಕಾಯುಕ್ತ, ಎಸಿಬಿಗಳಿಗೆ ದೂರು ನೀಡಿದ್ದು, ಕೆಲವು ತಿಂಗಳ ಹಿಂದೆ ಪುಟ್ಟರಾಜು ಕುಟುಂಬ ಮತ್ತು ಇತರರ ಒಡೆತನದ ಕಲ್ಲುಗಣಿ ಕಂಪನಿಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 90 ಲಕ್ಷ ರೂ. ದಂಡ ವಿಧಿಸಿತ್ತು.
ಇದಲ್ಲದೆ, ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಪರಿಶೀಲನೆಗೆ ತೆರಳಿದ್ದ ನಾಗಮಂಗಲ ವಿಭಾಗದ ಅರಣ್ಯಾಧಿಕಾರಿ ನೇತೃತ್ವದ ತಂಡಕ್ಕೆ ಸಂಸದ ಸಿ.ಎಸ್.ಪುಟ್ಟರಾಜು, ಕಲ್ಲುಗಣಿಗಾರಿಕೆ ನಡೆಸುತ್ತಿದ್ದವರನೇಕರು ಧಮಕಿ ಹಾಕಿದ್ದರು. ನಂತರ, ರಕ್ಷಣೆ ಕೋರಿ ಅರಣ್ಯ ಇಲಾಖೆ ಅಧಿಕಾರಿಗಳು ಡಿಸಿ, ಎಸ್ಪಿ ಅವರಿಗೆ ಮನವಿ ಮಾಡಿದ್ದರು.
ಬೇಬಿ ಬೆಟ್ಟದ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವ್ಯದರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವುದಲ್ಲದೆ, ಕೆಆರ್‍ಎಸ್ ಜಲಾಶಯಕ್ಕೂ ಅಪಾಯವಾಗಲಿದೆ, ಪರಿಸರ ಕೆಡುತ್ತಿದೆ ಎಂದು ಶಾಸಕ, ರೈತಸಂಘದ ನಾಯಕ ಕೆ.ಎಸ್.ಪ್ಮಟ್ಟಣ್ಣಯ್ಯ ನೇತೃತ್ವದಲ್ಲೂ ಹೋರಾಟ ನಡೆಯುತ್ತಿದೆ.