ಹಾವು ಕಡಿತ: ಮಹಿಳೆ ಸಾವು
Update: 2017-08-21 22:21 IST
ಮದ್ದೂರು, ಆ.21: ವಿಷಪೂರಿತ ಹಾವು ಕಚ್ಚಿ ತಾಲೂಕಿನ ಎನ್.ಕೋಡಿಹಳ್ಳಿ ಗ್ರಾಮದ ರೈತ ಮಹಿಳೆ ಪುಟ್ಟಸ್ವಾಮಿ ಅವರ ಪತ್ನಿ ಕಮಲಮ್ಮ(52) ಸಾವನ್ನಪ್ಪಿದ್ದಾರೆ.
ರವಿವಾರ ಸಂಜೆ ಕಮಲಮ್ಮ ಕಡಲೆಕಾಯಿ ಹೊಲದಲ್ಲಿ ಕಳೆ ತೆಗೆಯುತ್ತಿದ್ದಾಗ ಹಾವು ಕಚ್ಚಿ ಅಸ್ವಸ್ಥಗೊಂಡ ಅವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.