‘ವರ್ಷಧಾರೆ’ ಮೋಡಬಿತ್ತನೆ ಯಶಸ್ವಿ..!
Update: 2017-08-21 23:23 IST
ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಕೃತಕವಾಗಿ ಮಳೆ ಬರಿಸಲು ರಾಜ್ಯ ಸರಕಾರ ಕೈಗೊಂಡ ಮೋಡ ಬಿತ್ತನೆ ಯೋಜನೆಗೆ ಜಕ್ಕೂರು ವಿಮಾನಯಾನ ತರಬೇತಿ ಕೇಂದ್ರದಲ್ಲಿ ಇಂದು ವಿಧ್ಯುಕ್ತ ಚಾಲನೆ ದೊರೆಯಿತು. ವಿಮಾನಯಾನ ತರಬೇತಿ ಕೇಂದ್ರದಿಂದ ದಕ್ಷಿಣ ದಿಕ್ಕಿನ ಕಡೆ ಸುಮಾರು 60 ಕಿ.ಮೀ ದೂರ 50 ನಿಮಿಷಗಳ ಕಾಲ ಹಾರಾಟ ನಡೆಸಿದ ಎನ್267ಸಿಬಿ ವಿಮಾನವು ರಾಮನಗರ, ನೆಲಮಂಗಲ, ಆನೇಕಲ್ ಭಾಗಗಳಲ್ಲಿ ಯಶಸ್ವಿಯಾಗಿ ಮೋಡ ಬಿತ್ತನೆ ಮಾಡಿತು. ಪ್ರಾಯೋಗಿಕ ಮೋಡ ಬಿತ್ತನೆ ವಿಮಾನ ಹಾರಾಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಕೃಷಿ ಸಚಿವ ಕೃಷ್ಣಭೈರೇಗೌಡ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಪ್ರಯಾಣಿಸಿದರು. ಮಂಗಳವಾರದಿಂದ ಅಧಿಕೃತವಾಗಿ ನಗರದ ಎಚ್‌ಎಎಲ್ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆಗಾಗಿ ವಿಶೇಷ ವಿಮಾನಗಳು ಹಾರಾಟ ನಡೆಸಲಿವೆ.