×
Ad

ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಚಿತ್ರಕಲೆ ಸಹಕಾರಿ: ಶಾಸಕ ಕೆ.ಜಿ.ಬೋಪಯ್ಯ

Update: 2017-08-21 23:37 IST

ಮಡಿಕೇರಿ, ಆ.21: ಮಕ್ಕಳಲ್ಲಿರುವ ಪ್ರತಿಭೆ ಬೆಳಕಿಗೆ ತರುವಲ್ಲಿ ಚಿತ್ರಕಲೆಯಂಥ ಕಾಯಕ್ರಮಗಳು ಸಹಕಾರಿಯಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಿಲ್ಲಾ ಶಿಶುಕಲ್ಯಾಣ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ಲಯನ್ಸ್, ಲಯನೆಸ್, ಇನ್ನರ್ ವೀಲ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ  ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯ ಅಂಗವಾಗಿನ ಜಿಲ್ಲಾ ಮಟ್ಟದ  ಚಿತ್ರಕಲಾ  ಸ್ಪರ್ಧೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ  ಅವರು, ಶಿಶುಕಲ್ಯಾಣ ಸಂಸ್ಥೆ ಹಲವು ವರ್ಷಗಳಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಸಾವಿರಾರು ಮಕ್ಕಳಲ್ಲಿ ಕಲಾ ಪ್ರತಿಭೆಯನ್ನು ಬೆಳಕಿಗೆ ತಂದಿರುವುದು ಶ್ಲಾಘನೀಯ ಎಂದರು.

ಚಿತ್ರಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ,  ಮಕ್ಕಳಿಗೆ ಪೆÇೀಷಕರು ಸದಾ ಪ್ರೇರಕ ಶಕ್ತಿಯಾಗಿ ತಮ್ಮಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ವಿವರಿಸಿದರು.

ಈ ವೇಳೆ ಜಿಲ್ಲೆಯ 5 ರಿಂದ8, 9 ರಿಂದ 12, 13 ರಿಂದ 16 ವರ್ಷದವರೆಗೆ ಮತ್ತು ವಿಶೇಷ ಮಕ್ಕಳ ಪ್ರತ್ಯೇಕ  ವಿಭಾಗದಲ್ಲಿ ಆಯೋಜಿತವಾಗಿದ್ದ  ಚಿತ್ರಕಲಾ ಸ್ಪರ್ಧೆಯಲ್ಲಿ 205 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಕನ್ನಂಡ ಬೊಳ್ಳಪ್ಪ, ಲಯನೆಸ್ ಅಧ್ಯಕ್ಷೆ ಕವಿತಾ, ಇನ್ನರ್ ವೀಲ್ ಅಧ್ಯಕ್ಷೆ ಲತಾ ಚಂಗಪ್ಪ, ಜಿಲ್ಲಾ ಶಿಶುಕಲ್ಯಾಣ ಸಂಸ್ಥೆ ಅಧ್ಯಕ್ಷ ಕಲ್ಮಾಡಂಡ ಮೋಹನ್ ಮೊಣ್ಣಪ್ಪ, ರೋಟರಿ ಮಿಸ್ಟಿ ಹಿಲ್ಸ್ ಬುಲೆಟಿನ್ ಎಡಿಟರ್ ಬಿ.ಕೆ.ರವೀಂದ್ರರೈ, ನಿದೇ9ಶಕ ಪ್ರಶಾಂತ್ ವಣೇ9ಕರ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕಾಳಪ್ಪ, ಜಿಲ್ಲಾ ಶಿಶುಕಲ್ಯಾಣ ಸಂಸ್ಥೆ ನಿರ್ದೇಶಕಿ ನಮಿತಾ ರೈ, ನೀಲಮ್ಮ, ಗಂಗಮ್ಮ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News