×
Ad

ರಬ್ಬರ್ ತೋಟಗಳ ನೋಂದಣಿ ಕಡ್ಡಾಯ

Update: 2017-08-22 18:47 IST

ಶಿವಮೊಗ್ಗ,ಆ.22: ರಬ್ಬರ್ ಮಂಡಳಿಯು ರಬ್ಬರ್ ತೋಟದ ದೃಢೀಕರಣ ಯೋಜನೆಯನ್ನು ಪುನರ್ ಆರಂಭಿಸಿದೆ. ರಬ್ಬರ್ ಕೃಷಿಕರು ತಮ್ಮ ರಬ್ಬರ್ ಉತ್ಪನ್ನಗಳ ಸಾಗಾಣಿಕೆ ಸಮಯದಲ್ಲಿ ಮತ್ತು ರಬ್ಬರನ್ನು ಸಂಗ್ರಹಿಸುವ ಕೇಂದ್ರಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೋಂದಣಿ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಆದ್ದರಿಂದ ನೋಂದಣಿ ಕ್ರಮವು ಹೆಚ್ಚು ಉಪಯುಕ್ತವೆಂದು ಪರಿಗಣಿಸಿ, ರಬ್ಬರ್ ಮಂಡಳಿಯ ಸುಧಾರಿತ ದೃಡೀಕರಣ ಕ್ರಮಕ್ಕೆ ಮುಂದಾಗಿದೆ.

ಈ ನೂತನ ದೃಢೀಕರಣ ಪ್ರಮಾಣಪತ್ರವು ರಬ್ಬರ್ ತೋಟದ ಪ್ರಾಥಮಿಕ ವಿವರಗಳನ್ನೊಳಗೊಂಡಿರುತ್ತದೆ. ಮತ್ತು ರಬ್ಬರ್ ತೋಟದ ಉದ್ದ ಅಗಲಗಳ ವಿವರಗಳನ್ನು ಉಪಗ್ರಹದ ಸಹಾಯದಿಂದ ನಕ್ಷೆ ತಯಾರಿಸುವಂತೆ ಸಲಹೆಯನ್ನು ನೀಡಲಾಗಿದೆ. ಇದು ರಬ್ಬರ್ ತೋಟಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಮತ್ತು ಭವಿಷ್ಯದಲ್ಲಿ ನಿಖರವಾದ ಗೊಬ್ಬರದ ಶಿಫಾರಸ್ಸು ಮಾಡಲು ಸಹ ಸಹಕಾರಿಯಾಗಲಿದೆ.

ರಬ್ಬರ್ ತೋಟದ ದೃಢೀಕರಣದ ನೋಂದಾವಣೆಯನ್ನು ಪಕ್ಷ ಮತ್ತು ಅಪಕ್ಷ ರಬ್ಬರ್ ತೋಟಗಳನ್ನು ಸಹ ನೋಂದಾಯಿಸಬಹುದು. ಈ ನೋಂದಾವಣಿಗೆ ಕೃಷಿಕರು ಶೇ. 18ರಂತೆ ಜಿ.ಎಸ್.ಟಿ.ಶುಲ್ಕ ಸೇರಿದಂತೆ ಅಲ್ಪ ಪ್ರಮಾಣದ ಮೊತ್ತವನ್ನು ಪಾವತಿಸಬೇಕಾಗುತ್ತದೆ.

0.10ಹೆಕ್ಟೇರ್‍ನಿಂದ 0.50ಹೆಕ್ಟೇರ್‍ವರೆಗೆ ರೂ.118/-, 0.51ರಿಂದ 1.00ಹೆಕ್ಟೇರ್‍ವರೆಗೆ ರೂ.236/-, 1.01ರಿಂದ 10ಹೆಕ್ಟೇರ್‍ವರೆಗೆ ರೂ.590/- ಮತ್ತು 10ಹೆಕ್ಟೇರ್‍ಗೂ ಮೇಲ್ಪಟ್ಟು ಇರುವ ವಿಸ್ತೀರ್ಣಕ್ಕೆ ರೂ.1180/-ಶುಲ್ಕವನ್ನು ನಿಗಧಿಪಡಿಸಲಾಗಿದೆ.

ದೃಢೀಕರಣ ಪ್ರಮಾಣಪತ್ರವನ್ನು ಪಡೆಯಲಿಚ್ಚಿಸುವ ರಬ್ಬರ್ ಬೆಳೆಗಾರರು ತಮ್ಮ ವ್ಯಾಪ್ತಿಯಲ್ಲಿರುವ ಸ್ಥಳೀಯ ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ಶಿವಮೊಗ್ಗ ಹಾಗೂ ಸಾಗರ, ತೀರ್ಥಹಳ್ಳಿ, ಎನ್. ಆರ್.ಪುರ, ರಬ್ಬರ್ ಮಂಡಳಿ ಕ್ಷೇತ್ರೀಯ ಕಚೇರಿಗಳಲ್ಲೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಮಂಡಳಿಯ ಅಂತರ್ಜಾಲತಾಣದಲ್ಲಿಯೂ ಸಹ ಪಡೆಯಬಹುದಾಗಿದೆ. ರಬ್ಬರ್ ಮಂಡಳಿಯ ಅಧಿಕಾರಿಗಳು ಕೃಷಿಕರ ರಬ್ಬರ್ ತೋಟಗಳಿಗೆ ಭೇಟಿ ನೀಡಿ ತಾಂತ್ರಿಕ ಮಾಹಿತಿಗಳನ್ನು ಒದಗಿಸುವರು. ಕೃಷಿಕರು ಈ ಸದವಕಾಶದ ಲಾಭ ಪಡೆದುಕೊಂಡು ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳುವಂತೆ ಹಾಗೂ ತಮ್ಮ ತೋಟದ ದೃಡೀಕರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಂತೆ ರಬ್ಬರ್ ಮಂಡಳಿಯ ಪ್ರಾದೇಶಿಕ ಕಚೇರಿಯ ಉಪ ರಬ್ಬರ್ ಆಯುಕ್ತರು ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗಾಗಿ ದೂರವಾಣಿ ಸಂಖ್ಯೆ 08182-258830ನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News