ಹೊನ್ನಾವರ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Update: 2017-08-22 19:05 GMT

ಹೊನ್ನಾವರ,ಆ.22:ವಿದ್ಯಾರ್ಥಿಗಳು  ಜೀವನದಲ್ಲಿ  ಎಷ್ಟೇ ಎತ್ತರಕ್ಕೇರಿದರೂ  ತಮ್ಮನ್ನು ಹೆತ್ತು ಸಲಹಿದ ಪಾಲಕರನ್ನು  ಹಾಗೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಬಾರದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಗೋಪಾಲಕೃಷ್ಣ ಎಸ್. ಭಟ್  ಸಲಹೆ ನೀಡಿದರು

ಹೊನ್ನಾವರ ಅರ್ಬನ್‍ ಬ್ಯಾಂಕಿನ ನಡೆದ  2017ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮತನಾಡಿದ - ಅವರು ಪಾಲಕರು ವಿದ್ಯಾರ್ಥಿಗಳಿಗೆ ಆಗತ್ಯವಿರುವ ವಸ್ತುಗಳನ್ನುಮಾತ್ರ ಕೊಡಿಸಬೇಕು ಎಂದು ಹೇಳಿದರು.

98 ವರ್ಷಗಳ ಗ್ರಾಹಕ ಸೇವೆಯೊಂದಿಗೆ ಶತಮಾನೋತ್ಸವದ ಹೊಸ್ತಿಲಲ್ಲಿರುವ ಬ್ಯಾಂಕು ಹೀಗೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲಿ, ಒಂದುಗಿಡ ಬೆಳೆಯಲು ನೀರು, ಗಾಳಿ, ಮಣ್ಣಿನ ಅವಶ್ಯಕತೆಯಂತೆ ಪ್ರತಿಭೆಗೆಕೂಡಪುರಸ್ಕಾರ ಅಷ್ಟೇ ಮಹತ್ವದ್ದಿರುತ್ತದೆ. ಹೊನ್ನಾವರ ಅರ್ಬನ್ ಬ್ಯಾಂಕು ಹಲವಾರು ವರ್ಷಗಳಿಂದ ಈ ಪುರಸ್ಕಾರ ಮಾಡುತ್ತಾ ಬಂದಿರುತ್ತದೆ.ಇದಕ್ಕೆ ಸಾಕ್ಷಿಯಾಗಿ 25 ವರ್ಷಗಳ ಹಿಂದೆ ನಾನು ಹೊನ್ನಾವರ ಅರ್ಬನ್ ಬ್ಯಾಂಕಿನಿಂದ ಪುರಸ್ಕಾರ ಪಡೆದು ಇಂದು ನಾನು ಸ್ವತಃ ಬ್ಯಾಂಕಿನ ವತಿಯಿಂದ ಪುರಸ್ಕಾರ ನೀಡುತ್ತಿದ್ದೇನೆ ಎಂತಾ ತಿಳಿಸಲು ಸಂತೋಷ ಎನಿಸುತ್ತದೆ.ವಿದ್ಯಾರ್ಥಿಗಳು ಪ್ರತಿಭೆಯೊಂದಿಗೆ ಒಳ್ಳೆಯ ಸಂಸ್ಕೃತಿ, ಗುಣಮಟ್ಟ ಬೆಳೆಸಿಕೊಳ್ಳಬೇಕು ಮತ್ತು ಹೆತ್ತವರನ್ನುಹಾಗೂ ಶಿಕ್ಷಕರನ್ನು ಎಂದೂ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮಕ್ಕಳಿಗೆ ಅನಾವಶ್ಯಕ ಎಲ್ಲಾ ಸವಲತ್ತನ್ನು ನೀಡದಿರಲು ಪಾಲಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎರಡೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರನ್ನು, ತಾಲೂಕಿನಲ್ಲಿ ಮೊದಲ 3 ಸ್ಥಾನ ಪಡೆದ 3 ವಿದ್ಯಾರ್ಥಿಗಳ ಸಹಿತ ವಿವಿಧ ವರ್ಗಗಳಲ್ಲಿ ಪ್ರಥಮ ಬಂದವರನ್ನು, ಕ್ರೀಡೆ ಮತ್ತು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರನ್ನು, ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ವಿಶೇಷ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡವರನ್ನು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಮಕ್ಕಳಿಗೆ ನಗದು ನೀಡಿ ಪ್ರೋತ್ಸಾಹಿಸಲಾಯಿತು. ಹೀಗೆ ಒಟ್ಟೂ33 ಪ್ರತಿಭಾವಂತರಿಗೆ/ಪ್ರತಿಭಾನ್ವಿತರಿಗೆ ಬ್ಯಾಂಕಿನ ವತಿಯಿಂದಒಟ್ಟೂ96,000 ರೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಅದರಲ್ಲಿ ವಿಶೇಷವಾಗಿ ದೈಹಿಕ ನ್ಯೂನತೆಯ ವಿಭಾಗದಲ್ಲಿ ವಿಶ್ವ ಚೆಸ್‍ಚಾಂಪಿಯನ್‍ ಆಗಿರುವ ಸಮರ್ಥ ಜೆ. ರಾವ್  ಹಾಗೂ ಟೆನಿಸ್ ವಿಭಾಗದಲ್ಲಿ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಪಡೆದ ಕುಮಟಾದ ಯಾನಿಲಯದ ವಿದ್ಯಾರ್ಥಿ ಸಂದೇಶ ಕೃಷ್ಣ ಹರಿಕಾಂತ ಇವರನ್ನು ಪುರಸ್ಕರಿಸಿದ್ದು, ತನ್ನಜೀವದ ಹಂಗನ್ನುತೊರೆದು ನೀರಿನಲ್ಲಿ ಮುಳುಗಿ ಸಾಯುತ್ತಿರುವ ಜನರನ್ನು ರಕ್ಷಿಸಿದ ಭಟ್ಕಳದ ಸುರೇಶ ಬಸವ ಖಾರ್ವಿ ಮತ್ತು ಟೆಲಿಕಮ್ಯುನಿಕೇಶನ್‍ ಇಂಜಿನಿಯರಿಂಗ್ ವಿಭಾಗದಲ್ಲಿ ಆರು ಚಿನ್ನದ ಪದಕ ಪಡೆದ ಕುಮಟಾ ಅಳ್ವೆ ಕೊಡಿಯ ಶೃದ್ಧಾಜನಾರ್ಧನ ಶೇಟ್ ಇವರನ್ನು ಪುರಸ್ಕರಿಸಲಾಯಿತು.

ಬ್ಯಾಂಕಿನ ಅಧ್ಯಕ್ಷ  ರಾಘವ ವಿಷ್ಣು ಬಾಳೇರಿ ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕ ವಸಂತ ಹನುಮಂತಕರ್ಕಿಕರ ಅತಿಥಿಗಳನ್ನು ಪರಿಚಯಿಸಿದರು.. ಎಸ್.ಟಿ. ಭಟ್ಟ ಹಾಗೂ ಧನಂಜಯ ಪೈ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ವ್ಯವಸ್ಥಾಪಕ  ರಾಜೀವ ಶ್ಯಾನಭಾಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News